ಉತ್ತಮ ಬೆಂಗಳೂರಿಗಾಗಿ ಇಂದೇ ಸೇರಿಕೊಳ್ಳಿ

“ಹಳೆಯ ಬೆಂಗಳೂರು ಶಾಂತಿಯುತ, ಹಸಿರಿನಿಂದ ಕೂಡಿದ, ಕೆರೆಗಳು, ಉದ್ಯಾನವನಗಳು, ಸಾಲುಮರಗಳನ್ನು ಒಳಗೊಂಡ ಆಕರ್ಷಕ ನಗರವಾಗಿತ್ತು. ಹೊಸ ಬೆಂಗಳೂರು ನಗರವು ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯ ನಗರವಾಗಿದೆ. ಬೆಂಗಳೂರು, ಉದ್ಯಾನವನಗಳು ಮತ್ತು ಕೆರೆಗಳ ಜೊತೆಗೆ ಸಮೃದ್ಧವಾದ ನಗರವಾಗಲಿ ಎಂದು ನಾನು ಎದುರುನೋಡುತ್ತಿದ್ದೇನೆ. ನಮಗೆ ಅವಕಾಶಗಳು ಬೇಕು, ಆದರೆ ಸಂತೋಷದ ವೆಚ್ಚದಲ್ಲಿ ಅಲ್ಲ. ನಮಗೆ ಬೆಳವಣಿಗೆಯು ಬೇಕು, ಆದರೆ ಆರೋಗ್ಯದ ವೆಚ್ಚದಲ್ಲಿ ಅಲ್ಲ.”

– ಕುಪೇಂದ್ರ ರೆಡ್ಡಿ

ಶ್ರೀ ಕುಪೇಂದ್ರ ರೆಡ್ಡಿಯವರು, ಬೆಂಗಳೂರು ಒಂದು ವಿಲಕ್ಷಣವಾದ ಉದ್ಯಾನ ನಗರ ಮತ್ತು ನಿವೃತ್ತಿ ವೇತನದಾರರ ಸ್ವರ್ಗವಾಗಿದ್ದ ವರ್ಷಗಳಿಂದ, ಈಗ 10 ಮಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ನಗರವಾಗಿ ಹೊರಹೊಮ್ಮುತ್ತಿರುವ ವಿಕಾಸಕ್ಕೆ ಸಾಕ್ಷಿಯಾದವರು. ಅವರು ಒಬ್ಬ ಬೆಂಗಳೂರಿಗನಾಗಿ, ನಗರ ಬೆಳೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಲೇ ಅದೇ ಸಮಯದಲ್ಲಿ ಅದರ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭಾರತದಲ್ಲಿ ಮತ್ತು ವಿಶ್ವದಲ್ಲಿ ಕ್ರಿಯಾತ್ಮಕ ಮತ್ತು ಉನ್ನತ ನಗರಗಳಲ್ಲಿ ಒಂದಾಗಲು, ನಗರವು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿರುವಾಗ, ನಗರದ ಬೆಳವಣಿಗೆ ಕೂಡ ಆ ದಿಸೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಸಂಚಾರ, ನೀರಿನ ಕೊರತೆ, ಕಸ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಿಸಿದಂತೆ ಸಾಕಷ್ಟು ಕಾರ್ಯಗಳನ್ನು ಇನ್ನೂ ಮಾಡಬೇಕಾಗಿದೆ ಎಂದು ಶ್ರೀ ರೆಡ್ಡಿಯವರು ನಂಬುತ್ತಾರೆ.

ಮುಖ್ಯವಾಗಿ ಗಮನಹರಿಸುವ ಕ್ಷೇತ್ರಗಳು

ನಮ್ಮ ಬೆಂಗಳೂರನ್ನು ನಾವು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.




ಕೇಸ್ ಸ್ಟಡೀಸ್

Reading Time: 3 minutesಗೊಬ್ಬರ ಮಾಡುವ ಉಪಾಯ ಹಾಗೂ ಪ್ರಕ್ರಿಯೆಗಳು ಇಂಡಿಯಾದಲ್ಲಿ ವೇದಕಾಲದಿಂದಲೂ ಇವೆ. A Journey from Madras Through the Countries of Mysore, Canara, and Malabar (1807), ಪುಸ್ತಕದಲ್ಲಿ ಡಾ. ಫ್ರಾನ್ಸಿಸ್ ಬುಚನನ್ ಅವರು ನಗರದ ಸುತ್ತಲಿನ ಪ್ರದೇಶದಲ್ಲಿದ್ದ ರೈತರು ತಮ್ಮ ಹೊಲಗಳಿಗಾಗಿ ಕಸವನ್ನು ಪಡೆದುಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ತಾವು
ಅಂಕಣ   , , ,
Waste generated in Bangalore
Reading Time: 3 minutesನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಕಸವನ್ನು ಉತ್ಪಾದಿಸುತ್ತೇವೆ. ಉದಾಹರಣೆಗೆ ಆಹಾರವನ್ನೇ ತೆಗೆದುಕೊಳ್ಳಿ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಿರೇ? ತಿನ್ನಲು-ಸಿದ್ಧವಾಗಿರುವ ಆಹಾರವನ್ನು ಸೂಪರ್‌ಮಾರ್ಕೆಟಿನಲ್ಲಿ ಕೊಳ್ಳುವಿರೇ? ರೆಸ್ಟಾರೆಂಟಿನಲ್ಲಿ ತಿನ್ನುವಿರೇ? ಮನೆಯಲ್ಲಿ ಅಡುಗೆ ಮಾಡುವಿರೇ? ಇವೆಲ್ಲವೂ ಕಸವನ್ನು ಉತ್ಪಾದಿಸುತ್ತವೆ. ಅದು ತರಕಾರಿಯ ಸಿಪ್ಪೆಗಳಾಗಿರಬಹುದು, ಪ್ಯಾಕ್ ಮಾಡಿದ ಪೊಟ್ಟಣಗಳಾಗಿರಬಹುದು, ಇಲ್ಲವೇ ಉಳಿದ ಊಟವಾಗಿರಬಹುದು. ಏನೇ ಇರಲಿ ಕಸವಂತೂ ಉತ್ಪಾದನೆಯಾಗುತ್ತದೆ. 
ಅಂಕಣ   , , ,
Single use plastic in India
Reading Time: 4 minutesಪ್ಲಾಸ್ಟಿಕ್ ಮಾಲಿನ್ಯವು ಭೂಮಿಗೆ ನಿಜಕ್ಕೊ ಎದುರಾಗಿರುವ ಮತ್ತು ತಕ್ಷಣದ ಅಪಾಯವಾಗಿದೆ. ಪ್ಲಾಸ್ಟಿಕ್ ಎಂದಿಗೂ ಕೊಳೆಯುವುದಿಲ್ಲ. ಆದರೆ ಸಣ್ಣ ಸಣ್ಣ ತುಂಡುಗಳಾಗಿ(ಮೈಕ್ರೋ ಪ್ಲಾಸ್ಟಿಕ್) ಪರಿಸರಕ್ಕೆ ಹಾಗೂ ಜೀವಿಗಳಿಗೆ ಮತ್ತಷ್ಟು ಹಾನಿಯನ್ನುಂಟು ಮಾಡುವುದು.  ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ಪ್ರಜ್ಞೆ ಇದ್ದರೆ, ಒಂದು ಬಾರಿ ಮಾತ್ರ ಉಪಯೋಗಿಸುವ ಪ್ಲಾಸ್ಟಿಕ್‍ನ ಬಳಕೆಯನ್ನು ಕಡಿಮೆ ಮಾಡಿದರೆ ಮತ್ತು
ಅಂಕಣ   , ,

ಕುಪೇಂದ್ರ ರೆಡ್ಡಿ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ