ಕರ್ನಾಟಕದಲ್ಲಿ ಕಾಂಪೋಸ್ಟ್ ಕತೆ


Reading Time: 3 minutes

ಗೊಬ್ಬರ ಮಾಡುವ ಉಪಾಯ ಹಾಗೂ ಪ್ರಕ್ರಿಯೆಗಳು ಇಂಡಿಯಾದಲ್ಲಿ ವೇದಕಾಲದಿಂದಲೂ ಇವೆ. A Journey from Madras Through the Countries of Mysore, Canara, and Malabar (1807), ಪುಸ್ತಕದಲ್ಲಿ ಡಾ. ಫ್ರಾನ್ಸಿಸ್ ಬುಚನನ್ ಅವರು ನಗರದ ಸುತ್ತಲಿನ ಪ್ರದೇಶದಲ್ಲಿದ್ದ ರೈತರು ತಮ್ಮ ಹೊಲಗಳಿಗಾಗಿ ಕಸವನ್ನು ಪಡೆದುಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ತಾವು ಬೆಳೆದ ಬೆಳೆಯನ್ನು ಮಾರಲು ಮಾರುಕಟ್ಟೆಗೆ ಹೋದ ರೈತರು, ಮಾರುಕಟ್ಟೆಯಲ್ಲಿದ್ದ ಕಸವನ್ನು ಬುಟ್ಟಿಗೆ ತುಂಬಿಸಿಕೊಂಡು ಹಿಂದಿರುಗುತ್ತಿದ್ದರು. ಅಂದಿನ ಕಸವು ಸಂಪೂರ್ಣವಾಗಿ ಸಾವಯವ ಕಸವಾಗಿರುತ್ತಿತ್ತು. ಅದನ್ನು ಗುಂಡಿಗೆ ಸುರಿದು ಕೊಳೆಯಲು ಬಿಡುತ್ತಿದ್ದರು. ಹೀಗೆ ಕೊಳೆತು ಆದ ಗೊಬ್ಬರವನ್ನು, ಮುಂದಿನ ವರ್ಷದ ಕೃಷಿ ಕೆಲಸ ಶುರುಮಾಡುವ ಮೊದಲೇ ಹೊಲಕ್ಕೆ ಹಾಕಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದರು

ಪ್ರತಿಯೊಂದು ಮನೆಯಲ್ಲಿದ್ದ ತಿಪ್ಪೆ

ಕರ್ನಾಟಕದ ಹಲವು ಮನೆಗಳ ಹಿತ್ತಲಿನಲ್ಲಿ ‘ತಿಪ್ಪೆ’ ಎಂದು ಕರೆಯಲಾಗುವ ಗುಂಡಿ ಇತ್ತು, ಕೆಲವು ಮನೆಗಳಲ್ಲಿ ಈಗಲೂ ಇದೆ. ಆ ತಿಪ್ಪೆಗುಂಡಿಗೆ ಹಸುವಿನ ಸಗಣಿ ಹಾಗೂ ಇನ್ನಿತರ ಸಾವಯವ ಕಸವನ್ನು ಎಸೆಯುತ್ತಾರೆ. ದಿನಗಳೆದಂತೆ ಅಲ್ಲಿದ್ದ ಕಸ ಕೊಳೆತು ಸಾವಯವ ಗೊಬ್ಬರವಾಗಿ ಮಾರ್ಪಡುತ್ತದೆ. ಇದನ್ನು ‘ತಿಪ್ಪೆ ಗೊಬ್ಬರ’ ಇಲ್ಲವೇ ‘ತಿಪ್ಪೆ ಗೊಬ್ರ’ ಎಂದು ಕರೆಯಲಾಗುತ್ತದೆ. ಈ ಗೊಬ್ಬರವನ್ನು ಹೊಲಗದ್ದೆಗಳಿಗೆ ಹಾಗೂ ಹೂದೋಟಗಳಿಗೆ ಹಾಕಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಾಗುವುದು.

ತಿಪ್ಪೆ ಹಾಗೂ ತಿಪ್ಪೆ ಗೊಬ್ಬರ ನಮ್ಮ ಸಂಸ್ಕೃತಿಯ ಬಹು ಮುಖ್ಯ ಅಂಗಗಳಾಗಿವೆ. ಇದು ಫಸಲನ್ನು ಉದಾರವಾಗಿ ಕೊಡುವುದರ ಸಂಕೇತವಾಗಿದೆ, ಹಾಗಾಗಿ, ಇದನ್ನು ತಿಪ್ಪಮ್ಮ ಇಲ್ಲವೇ ತಿಪ್ಪಯ್ಯ ಎಂದು ಪೂಜಿಸುತ್ತಾರೆ. ರಾಜ್ಯದಲ್ಲಿ ಆಗ ವ್ಯವಸಾಯವು ಬಹುಮುಖ್ಯ ಭಾಗವಾದ್ದರಿಂದ ಗೊಬ್ಬರವು ಮುಖ್ಯವಾದ ಸರಕಾಗಿತ್ತು. ನನಗೆ ಇನ್ನೂ ನೆನಪಿದೆ, ಗೊಬ್ಬರಕ್ಕೆ ಅದೆಷ್ಟು ಬೇಡಿಕೆ ಇತ್ತೆಂದರೆ, ನಮ್ಮ ಮನೆಯ ಹಿತ್ತಲಿನ ಗುಂಡಿಯಿಂದ ಗೊಬ್ಬರವನ್ನೇ ಕದ್ದಿದ್ದರು. ಹೌದು, ಆಗ ಕಸವು ಅಷ್ಟೊಂದು ಬೆಲೆಬಾಳುತ್ತಿತ್ತು.

ಗೊಬ್ಬರಕ್ಕೆ ಬೆಂಬಲ

ಗೊಬ್ಬರ ಹಾಗೂ ಕಸಕ್ಕೆ ಇದ್ದ ಗೌರವ ಹಾಗೂ ಬೇಡಿಕೆ 1947ರ ಸ್ವಾತಂತ್ರ್ಯದ ತನಕ ಮುಂದುವರೆಯಿತು. ಎರಡನೇ ಮಹಾಯುದ್ಧದ ಹೊತ್ತಿನಲ್ಲಿ ಬ್ರಿಟೀಷರು ನಗರದ ಕಸವನ್ನು ಗೊಬ್ಬರ ಮಾಡಲು ಸಾಕಷ್ಟು ಪ್ರೋತ್ಸಾಹ ನೀಡಿದರು. ಗೊಬ್ಬರ ಹೆಚ್ಚಾದರೆ ಆಹಾರ ಬೆಳೆಯುವುದನ್ನು ಹೆಚ್ಚಿಸಬಹುದೆಂದು ಅವರ ಉದ್ದೇಶವಾಗಿತ್ತು. ಇದೇ ಹೊತ್ತಿನಲ್ಲಿ, ಇಂಡಿಯಾದಲ್ಲಿ ಹಲವಾರು ಸಾಂಪ್ರದಾಯಿಕವಾದ ಗಾಳಿಯಿರುವ ಹಾಗೂ ಗಾಳಿಯಿರದ ಗೊಬ್ಬರ ಮಾಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಕೆಲಸದಲ್ಲಿ ಬೆಂಗಳೂರು ಮುಂಚೂಣಿಯಲ್ಲಿತ್ತು. 1939 ರಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡಾ. ಎಲ್. ಎನ್. ಆಚಾರ್ಯ ಅವರು, ಗಾಳಿಯಿರದೆ ಗೊಬ್ಬರ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ಅದು ಬೆಂಗಳೂರಿನ ಗೊಬ್ಬರ ಮಾಡುವ ವಿಧಾನ ಎಂದು ಹೆಸರುವಾಸಿಯಿತು. ಇಂಡಿಯಾದಲ್ಲಿ ಬಳಸಿದ ಇನ್ನೂ ಕೆಲವು ಗೊಬ್ಬರ ಮಾಡುವ ವಿಧಾನಗಳೆಂದರೆ ಇಂದೋರ್ ವಿಧಾನ ಹಾಗೂ ಕೊಯಮತ್ತೂರು ವಿಧಾನ

ಮಾಯವಾದ ತಿಪ್ಪೆ

20ನೇ ಶತಮಾನದ ನಂತರದಲ್ಲಿ ಪ್ಲಾಸ್ಟಿಕ್ ಬೆರೆತ ಸಾವಯವ ಕಸದ ಪ್ರಮಾಣ ಕೂಡಲೇ ಹೆಚ್ಚಿತು. ಪ್ಲಾಸ್ಟಿಕ್ ಬೆರೆತ ಗೊಬ್ಬರವು, ಬೀಜ ಮೊಳಕೆ ಒಡೆಯುವುದನ್ನು ತಡೆಯುತ್ತಿತ್ತು, ಗಿಡಗಳು ತಮ್ಮ ಬೇರನ್ನು ನೆಲದಾಳಕ್ಕೆ ತಲುಪದಂತೆ ತಡೆಹಿಡಿಯುತ್ತಿತ್ತು, ಮಳೆನೀರು ಮಣ್ಣಿನೊಳಗೆ ಸೋಸಿ ಹೋಗದಂತೆ ತಡೆಯುತ್ತಿತ್ತು. ಜೊತೆಗೆ ಅದು ಸೂಕ್ಷ್ಮಜೀವಿಗಳು ಹಾಗೂ ಸೊಳ್ಳೆಗಳ ಆವಾಸ ಸ್ಥಾನವಾಯಿತು. ಗೊಬ್ಬರದಿಂದ ಪ್ಲಾಸ್ಟಿಕನ್ನು ಬೇರ್ಪಡಿಸುವ ಕೆಲಸ ಹೆಚ್ಚು ಕೆಲಸಗಾರರನ್ನು ಬೇಡುವಂತಹ ಕೆಲಸ. ಹಾಗಾಗಿ, ಗೊಬ್ಬರ ಮಾಡುವ ಕ್ರಮಕ್ಕೆ ದಿನೇ ದಿನೇ ಬೇಡಿಕೆ ಕುಸಿಯುತ್ತಾ ಹೋಯಿತು.

ಇಂಡಿಯಾದ ಹಸಿರು ಕ್ರಾಂತಿಯ ಹೊತ್ತಿನಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿದ ರೈತರಿಗೆ ಸರ್ಕಾರವು ದೊಡ್ಡ ಮಟ್ಟದ ಸಹಾಯಧನ ನೀಡಿತ್ತು. ಹಲವಾರು ಎಕರೆ ಕೃಷಿ ಭೂಮಿಯನ್ನು ಮನೆ ಕಟ್ಟಲು ಹಾಗೂ ವ್ಯಾಪಾರದ ಉದ್ದೇಶಗಳಿಗೆ ಬಳಸಿಕೊಳ್ಳಲಾಯಿತು.

ಮೇಲಿನ ಎಲ್ಲಾ ಕಾರಣಗಳು ಗೊಬ್ಬರದ ಬೇಡಿಕೆ ಹಾಗೂ ಪೂರೈಕೆಯನ್ನು ಕುಸಿಯುವಂತೆ ಮಾಡಿತು.

ಬೆಂಗಳೂರಿನಲ್ಲಿ ಬೆರಕೆ ಕಸದ ವಿಲೇವಾರಿ

ಮನೆ ಹಾಗೂ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಕಸವನ್ನು ಯಾವುದಕ್ಕೂ ಬಳಸಲಾಗುತ್ತಿಲ್ಲ. ಮೊದಲಿಗೆ ಬೆಂಗಳೂರು ನಗರ ಪಾಲಿಕೆಯವರು (ಬಿಸಿಸಿ) ನಗರದಲ್ಲಿದ್ದ ಪಾಳುಬಿದ್ದ ಕಲ್ಲುಗಣೆಗಳಿಗೆ ಈ ಬೆರಕೆ ಕಸವನ್ನು ಸುರಿಯುತ್ತಿದ್ದರು. ಆದರೆ, ಸಂಸ್ಕರಿಸದ ಕಸವು ಆ ಪ್ರದೇಶದ ನೆಲ, ನೀರು ಹಾಗು ಗಾಳಿಯನ್ನು ಕೊಳಕಾಗಿಸಲು ಶುರುಮಾಡಿತು. ಬಳಿಕ ಅವರು ಕಸವನ್ನು ಸುರಿಯಲು ನಗರದ ಹೊರವಲಯದಲ್ಲಿರುವ ಬರಡು ನೆಲವನ್ನು ಹುಡುಕಲಾರಂಭಿಸಿದರು. ಸಂಸ್ಕರಿಸದ ಕಸವನ್ನು ಲೋಡ್‌ಗಟ್ಟಲೆ ಈ ಜಾಗಗಳಿಗೆ ಸುರಿಯಲಾಯಿತು. ಅದರಲ್ಲಿ ಕೆಲವು ಕಸದ ರಾಶಿಗಳನ್ನು ಬಟ್ಟಬಯಲೇ ಬೆಂಕಿ ಹಾಕಿ ಸುಡಲಾಯಿತು. ಇದರಿಂದ ಪರಿಸರ ಮಲಿನವಾಗಿದ್ದಲ್ಲದೇ, ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳೂ ಎದುರಾದವು. ಆ ಪ್ರದೇಶಗಳಲ್ಲಿ ಸೊಳ್ಳೆ, ನೊಣ ಹಾಗೂ ಇಲಿಹೆಗ್ಗಣಗಳ ಸಂಖ್ಯೆ ಎಗ್ಗಿಲ್ಲದೇ ಹೆಚ್ಚುತ್ತಾ ಹೋಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆಯ (ಎಸ್‌ಡಬ್ಲ್ಯೂಎಮ್) ನಿಯಮಗಳು 2016 ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಆದರೂ, ಈಗ ಸಂಸ್ಕರಣ ವಲಯಗಳಿಗೆ ಕೇವಲ ವಿಂಗಡಿಸಿದ ಕಸ ಹೋಗಬೇಕೆಂದು ನಿಯಮವಿದೆ. ಹಾಗಾಗಿ, ಪ್ರತಿದಿನ ಉತ್ಪಾದನೆಯಾಗುವ 2,800 ಟನ್ ಬೆರಕೆ ಕಸವು ಬೆಂಗಳೂರು ಹಾಗೂ ಬೆಂಗಳೂರು ಸುತ್ತ ಇರುವ ಎಕರೆಗಟ್ಟಲೆ ತಿಪ್ಪೆಗೆ ಸೇರುತ್ತದೆ. ಸದ್ಯಕ್ಕೆ, ಕರ್ನಾಟಕದ ಉದ್ದಗಲದಲ್ಲಿರುವ ತಿಪ್ಪೆಗಳಲ್ಲಿ 50 ರಿಂದ 60 ಲಕ್ಷ ಟನ್ ಸಂಸ್ಕರಿಸದ ಕಸ ಬಿದ್ದಿದೆ, ಅದು ದಿನೇ ದಿನೇ ಹೆಚ್ಚುತ್ತಿದೆ ಕೂಡ. ಬಿಬಿಎಂಪಿಯವರು ನಗರದ ಕಸವನ್ನು ಸುರಿಯಲು ಹೊಸ ತಿಪ್ಪೆ ಹಾಗೂ ಕಲ್ಲುಗಣೆಗಳನ್ನು ಹುಡುಕಲು ಪ್ರಯಾಸಪಡುತ್ತಿದೆ.

ಗೊಬ್ಬರಕ್ಕೆ ಹೆಚ್ಚುತ್ತಿರುವ ಬೇಡಿಕೆ

ಹಸಿ ಕಸ ಹೇಗಿದ್ದರೂ ತಿಪ್ಪೆಯಲ್ಲಿ ಕೊಳೆಯುತ್ತದೆ, ಹಾಗಿದ್ದ ಮೇಲೆ ಅದನ್ನೇಕೆ ನಾವು ಗೊಬ್ಬರ ಮಾಡಬೇಕು?

ದೊಡ್ಡ ತಿಪ್ಪೆಗೆ ಕಸ ಬಿದ್ದ ಮೇಲೆ, ಅದರಲ್ಲಿರುವ ಸಾವಯವ ಕಸಕ್ಕೆ ಗಾಳಿಯು ತಲುಪುವುದಿಲ್ಲ, ಅದರಿಂದಾಗಿ ಗಾಳಿಯಿರದೇ ಕಸವು ಒಡೆದು ಕೊಳೆಯಲಾರಂಭಿಸುತ್ತದೆ. ಇದರಿಂದಾಗಿ ಅಪಾಯಕಾರಿ ಹಸಿರುಮನೆ ಗಾಳಿಗಳು ಬಿಡುಗಡೆಯಾಗಿ ಭೂಮಿಯ ವಾತವರಣಕ್ಕೆ ಹಾನಿಯುಂಟುಮಾಡುತ್ತವೆ. ಒಂದು ವೇಳೆ, ಅದೇ ಹಸಿ ಕಸವನ್ನು ಗೊಬ್ಬರವನ್ನಾಗಿಸಿದರೆ, ಅದು ಗಾಳಿಯ ನೆರವಿನಿಂದ ಕೊಳೆತು, ನಮಗೆ ಉಚಿತವಾದ ಗೊಬ್ಬರವನ್ನು ನೀಡುತ್ತದೆ.

ಇಂದು, ಒಂದು ಟನ್ ಸಾವಯವ ಗೊಬ್ಬರಕ್ಕೆ ಸುಮಾರು 800 ರೂಪಾಯಿ ಬೆಲೆಯಿದೆ, ಅದು ಇನಾರ್ಗ್ಯಾನಿಕ್ ಗೊಬ್ಬರದ ಕಾಲು ಭಾಗದಷ್ಟಾಗಿದೆ. ಹಾಗಾಗಿ, ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದೆ, ಅದೂ ರೈತರಿಂದ ಇದಕ್ಕೆ ಬೇಡಿಕೆಯಿದೆ.

2017 ರಲ್ಲಿ, ಕರ್ನಾಟಕ ರಾಜ್ಯ ಗೊಬ್ಬರ ಅಭಿವೃದ್ಧಿ ಪಾಲಿಕೆಯು ಬೆಂಗಳೂರಿನಲ್ಲಿ ಕಲೆಹಾಕಿದ 600 ಟನ್ ಹಸಿ ಕಸದಿಂದ 4,306 ಟನ್‌ಗಳಷ್ಟು ಗೊಬ್ಬರವನ್ನು ಸಂಸ್ಕರಿಸಿದೆ. ಈ ಗೊಬ್ಬರವು ಕೇವಲ ಐದು ನಿಮಿಷದಲ್ಲಿ ಮಾರಾಟವಾಯಿತು.

ಬೆಂಗಳೂರಿನಲ್ಲಿ ಒಬ್ಬರಿಂದ ದಿನಕ್ಕೆ ಸುಮಾರು 440 ಗ್ರಾಂ ಕಸ ಉತ್ಪಾದನೆಯಾಗುತ್ತದೆ. ನಾಲ್ಕು ಮಂದಿ ಇರುವ ಒಂದು ಕುಟುಂಬದವರು ಪ್ರತಿದಿನ 1.76 ಕೆಜಿಯಷ್ಟು ಕಸವನ್ನು ಉತ್ಪಾದಿಸುತ್ತಾರೆ. ಇದರಲ್ಲಿ, 64% (ಕುಟುಂಬವೊಂದಕ್ಕೆ 1.13 ಕೆಜಿ) ಹಸಿ ಕಸವಿರುತ್ತದೆ. ನಾವೆಲ್ಲರೂ ಕಸವನ್ನು ಮನೆಯಲ್ಲೇ ವಿಂಗಡಿಸಿ, ಹಸಿ ಕಸವನ್ನು ಗೊಬ್ಬರವಾಗಿಸಿದರೆ ಹಲವಾರು ಅನುಕೂಲಗಳಿವೆ:

  1. ತಿಪ್ಪೆಗೆ ಹೋಗುವ ಕಸದ ಪ್ರಮಾಣವನ್ನು ಕಡಿಮೆ ಮಾಡಬಹುದು.

  2. ನಮ್ಮ ಕೈದೋಟಕ್ಕೆ ಬೇಕಾದ ಮಣ್ಣು ಉತ್ಪಾದನೆಯಾಗುವುದು.

  3. ರಾಜ್ಯದ ರೈತರ ಅಗತ್ಯವು ಪೂರೈಕೆಯಾಗುವುದು.

  4. ನಮ್ಮ ಆಹಾರದಲ್ಲಿರುವ ರಾಸಾಯನಿಕಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

ಗಿರುವ ಪ್ರಶ್ನೆ ಎಂದರೆ. ಇದನ್ನು ಎಲ್ಲಿ ಮತ್ತು ಹೇಗೆ ಶುರುಮಾಡುವುದು?

ಮನೆಯಲ್ಲಿ ಕಸ ವಿಂಗಡನೆ ಮಾಡುವ ಕುರಿತು ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಈ ಬಗೆಯ ಲೇಖನಗಳನ್ನು ನೀವು ಇನ್ನೂ ಹೆಚ್ಚು ಪಡೆಯಲು ಬಯಸುತ್ತೀರಾ?

Leave a Reply

Your email address will not be published. Required fields are marked *

ten − 4 =

ಇತ್ತೀಚೆಗೆ ಸೇರಿಸಿದ ವಿಷಯ

ಶೂನ್ಯ-ತ್ಯಾಜ್ಯ ಆಚರಣೆಗಳ ಸುತ್ತಲಿನ ಕಟ್ಟುಕಥೆಗಳನ್ನು ಉದ್ದೇಶಿಸಿ


Reading Time: 2 minutes

ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಪಾಟ್‌ಪುರಿಯಾಗಿರುವ ಭಾರತವು ನಮ್ಮ ಬಹುಸಂಖ್ಯೆಯ ಹಬ್ಬಗಳನ್ನು ಆಡಂಬರದಿಂದ ಆಚರಿಸುತ್ತದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳು ಒಟ್ಟಿಗೆ ಸೇರುವ ಸಂತೋಷದಾಯಕ ಸಂದರ್ಭಗಳು ಅವು. ಆದ್ದರಿಂದ, ನಾವು ಅದನ್ನು ಯಾವಾಗಲೂ ಭವ್ಯವಾಗಿ ಮಾಡಿದ್ದೇವೆ. ಈ ಸಂಪ್ರದಾಯಗಳು ಆಧುನಿಕ ಯುಗಕ್ಕೆ ತಕ್ಕಂತೆ ತಲೆಮಾರುಗಳ ಮೂಲಕ ವಿಕಸನಗೊಂಡಿವೆ. ದುರದೃಷ್ಟವಶಾತ್, ನಮ್ಮ ಆಚರಣೆಗಳಿಗೆ ನಾವು ಸೇರಿಸಿದ ಆಧುನಿಕ ಸ್ಪರ್ಶವು…

eco-friendly events KReate zero-waste sustainable events zero-waste celebrations zero-waste events

0 Comments

ತ್ಯಾಜ್ಯನೀರಿನ ಮರುಬಳಕೆ – ಭವಿಷ್ಯಕ್ಕಾಗಿ ಹೂಡಿಕೆ (ಭಾಗ 2)


Reading Time: 3 minutes

ಪುನಃ ಪಡೆದುಕೊಂಡ ನೀರಿನ ಪ್ರಾಮುಖ್ಯತೆಯನ್ನು ಈಗ ನೀವು ತಿಳಿದಿರುವಿರಿ, ತ್ಯಾಜ್ಯನೀರಿನ ಮರುಬಳಕೆಗೆ ಅನುಕೂಲಕರವಾದ ಭಾರತದಾದ್ಯಂತದ ವಿವಿಧ ನೀತಿಗಳು ಮತ್ತು ಉಪಕ್ರಮಗಳನ್ನು ನೋಡೋಣ. ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣಾ ನೀತಿಗಳು 1974 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯು ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಯನ್ನು ಬೆಂಬಲಿಸುವ ಮೊದಲ ನೀತಿಯಾಗಿದೆ. ಇದು ಜಲಮೂಲಗಳಿಗೆ ಕೈಗಾರಿಕೆಗಳ ಮಾಲಿನ್ಯಕಾರಕಗಳ ವಿಸರ್ಜನೆಯನ್ನು  ನಿರ್ಬಂಧಿಸುತ್ತದೆ….

Waste water Water Conservation

0 Comments

ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಮ್ಮ ರೈತರಿಗೆ ಅಧಿಕಾರ ನೀಡಿ


Reading Time: 4 minutes

ಭಾರತವು ಬಾಳೆಹಣ್ಣು, ಮಾವು, ಪಪ್ಪಾಯಿ ಮತ್ತು ಪೇರಳೆಗಳಂತಹ ಅನೇಕ ತಾಜಾ ಹಣ್ಣುಗಳು, ಕಡಲೆ ಮತ್ತು ಒಕ್ರಾ ತರಕಾರಿಗಳು, ಹಾಲು, ಮೆಣಸಿನಕಾಯಿ, ಕಾಳುಮೆಣಸು ಮತ್ತು ಶುಂಠಿಯಂತಹ ಪ್ರಮುಖ ಮಸಾಲೆಗಳು, ಸೆಣಬಿನಂತಹ ನಾರಿನ ಬೆಳೆಗಳು, ರಾಗಿ ಮತ್ತು ಕ್ಯಾಸ್ಟರ್ ಬೀಜಗಳನ್ನು ಉತ್ಪಾದಿಸುವಲ್ಲಿ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ನಾವು ಗೋಧಿ ಮತ್ತು ಭತ್ತದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು…

farmer empowerment Indian economy Indian farmers

0 Comments