ಉತ್ತಮ ಬೆಂಗಳೂರಿಗಾಗಿ ಇಂದೇ ಸೇರಿಕೊಳ್ಳಿ

“ಹಳೆಯ ಬೆಂಗಳೂರು ಶಾಂತಿಯುತ, ಹಸಿರಿನಿಂದ ಕೂಡಿದ, ಕೆರೆಗಳು, ಉದ್ಯಾನವನಗಳು, ಸಾಲುಮರಗಳನ್ನು ಒಳಗೊಂಡ ಆಕರ್ಷಕ ನಗರವಾಗಿತ್ತು. ಹೊಸ ಬೆಂಗಳೂರು ನಗರವು ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯ ನಗರವಾಗಿದೆ. ಬೆಂಗಳೂರು, ಉದ್ಯಾನವನಗಳು ಮತ್ತು ಕೆರೆಗಳ ಜೊತೆಗೆ ಸಮೃದ್ಧವಾದ ನಗರವಾಗಲಿ ಎಂದು ನಾನು ಎದುರುನೋಡುತ್ತಿದ್ದೇನೆ. ನಮಗೆ ಅವಕಾಶಗಳು ಬೇಕು, ಆದರೆ ಸಂತೋಷದ ವೆಚ್ಚದಲ್ಲಿ ಅಲ್ಲ. ನಮಗೆ ಬೆಳವಣಿಗೆಯು ಬೇಕು, ಆದರೆ ಆರೋಗ್ಯದ ವೆಚ್ಚದಲ್ಲಿ ಅಲ್ಲ.”

– ಕುಪೇಂದ್ರ ರೆಡ್ಡಿ

ಶ್ರೀ ಕುಪೇಂದ್ರ ರೆಡ್ಡಿಯವರು, ಬೆಂಗಳೂರು ಒಂದು ವಿಲಕ್ಷಣವಾದ ಉದ್ಯಾನ ನಗರ ಮತ್ತು ನಿವೃತ್ತಿ ವೇತನದಾರರ ಸ್ವರ್ಗವಾಗಿದ್ದ ವರ್ಷಗಳಿಂದ, ಈಗ 10 ಮಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ನಗರವಾಗಿ ಹೊರಹೊಮ್ಮುತ್ತಿರುವ ವಿಕಾಸಕ್ಕೆ ಸಾಕ್ಷಿಯಾದವರು. ಅವರು ಒಬ್ಬ ಬೆಂಗಳೂರಿಗನಾಗಿ, ನಗರ ಬೆಳೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಲೇ ಅದೇ ಸಮಯದಲ್ಲಿ ಅದರ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭಾರತದಲ್ಲಿ ಮತ್ತು ವಿಶ್ವದಲ್ಲಿ ಕ್ರಿಯಾತ್ಮಕ ಮತ್ತು ಉನ್ನತ ನಗರಗಳಲ್ಲಿ ಒಂದಾಗಲು, ನಗರವು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿರುವಾಗ, ನಗರದ ಬೆಳವಣಿಗೆ ಕೂಡ ಆ ದಿಸೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಸಂಚಾರ, ನೀರಿನ ಕೊರತೆ, ಕಸ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಿಸಿದಂತೆ ಸಾಕಷ್ಟು ಕಾರ್ಯಗಳನ್ನು ಇನ್ನೂ ಮಾಡಬೇಕಾಗಿದೆ ಎಂದು ಶ್ರೀ ರೆಡ್ಡಿಯವರು ನಂಬುತ್ತಾರೆ.

ಮುಖ್ಯವಾಗಿ ಗಮನಹರಿಸುವ ಕ್ಷೇತ್ರಗಳು

ನಮ್ಮ ಬೆಂಗಳೂರನ್ನು ನಾವು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.




ಕೇಸ್ ಸ್ಟಡೀಸ್

Reading Time: 2 minutesಜೂನ್ 8 ರಂದು ದೇಶದಲ್ಲಿ ತಡೆರಹಿತ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಅನ್ಲಾಕ್ ಮಾಡಲಾಗಿದೆ. ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಮಾಲ್‌ಗಳು ಮತ್ತು ಪೂಜಾ ಸ್ಥಳಗಳು ಸಾರ್ವಜನಿಕರಿಗೆ ತೆರೆಯಲು ಪ್ರಾರಂಭಿಸಿವೆ. ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಸುರಕ್ಷತಾ ನಿಯಮಗಳನ್ನು ಅನುಸರಿಸುವ ಭಾಗವಾಗಿ, ಅನೇಕ ರೆಸ್ಟೋರೆಂಟ್‌ಗಳು ಅನಿರ್ದಿಷ್ಟ ಅವಧಿಗೆ ಬಿಸಾಡಬಹುದಾದ ಟೇಬಲ್‌ವೇರ್ ಅನ್ನು ಬಳಸುತ್ತಿವೆ.
ಅಂಕಣ   , ,
Reading Time: 2 minutesತ್ಯಾಜ್ಯನೀರು ಎನ್ನುವುದು ಮಾನವನ ಬಳಕೆಯಿಂದ ಕಲುಷಿತಗೊಂಡ ಯಾವುದೇ ನೀರು. ಇದು ದೇಶೀಯ, ಕೈಗಾರಿಕಾ, ವಾಣಿಜ್ಯ ಅಥವಾ ಕೃಷಿ ಚಟುವಟಿಕೆಗಳ ಉಪಉತ್ಪನ್ನವಾಗಿದೆ.   ಭಾರತವು ದಿನಕ್ಕೆ ಸರಾಸರಿ 61,754 ಮಿಲಿಯನ್ ಲೀಟರ್ (ಎಂಎಲ್‌ಡಿ) ನಷ್ಟು  ಕೊಳಚೆನೀರನ್ನು ಉತ್ಪಾದಿಸುತ್ತದೆ. ವರ್ಗ I (ನಗರ) ಮತ್ತು II ನೇ ವರ್ಗ (ಪಟ್ಟಣ) ಒಟ್ಟುಗೂಡಿಸುವಿಕೆಗಳು 15,644 ಎಂಎಲ್‌ಡಿ
ಅಂಕಣ   , ,
Dry, wet and hazardous waste
Reading Time: 4 minutesನೀವು ಪ್ರತಿ ದಿನ ಉತ್ಪಾದಿಸುವ ಕಸದ ಪ್ರಮಾಣವನ್ನು ಊಹಿಸುತ್ತೀರಾ? ಬೆಂಗಳೂರಿನಲ್ಲಿ ಪ್ರತಿ ದಿನ 5000 ಟನ್‌ಗಿಂತ ಹೆಚ್ಚು ಕಸ ಉತ್ಪಾದನೆಯಾಗುತ್ತದೆ. ಇದರಲ್ಲಿ ಸುಮಾರು 64% ಆರ್ಗ್ಯಾನಿಕ್ ಇಲ್ಲವೇ ಹಸಿ ಕಸವಾಗಿದೆ. ಇದನ್ನು ಗೊಬ್ಬರವಾಗಿ ಮಾರ್ಪಡಿಸಿ ಕೈದೋಟಕ್ಕೆ ಬಳಸಬಹುದು ಇಲ್ಲವೇ ರೈತರಿಗೆ ಮಾರಬಹುದು. ಉಳಿದ 28% ಒಣ ಕಸ, ಇಷ್ಟೊಂದು ದೊಡ್ಡ ಪ್ರಮಾಣದ
ಅಂಕಣ   , ,

ಕುಪೇಂದ್ರ ರೆಡ್ಡಿ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ