ಮನೆಯಲ್ಲೇ ಕಸ ವಿಂಗಡಿಸುವುದರ ಕುರಿತು ನೀವು ತಿಳಿದಿರಬೇಕಾದ್ದು


Reading Time: 4 minutes

ನೀವು ಪ್ರತಿ ದಿನ ಉತ್ಪಾದಿಸುವ ಕಸದ ಪ್ರಮಾಣವನ್ನು ಊಹಿಸುತ್ತೀರಾ?

ಬೆಂಗಳೂರಿನಲ್ಲಿ ಪ್ರತಿ ದಿನ 5000 ಟನ್‌ಗಿಂತ ಹೆಚ್ಚು ಕಸ ಉತ್ಪಾದನೆಯಾಗುತ್ತದೆ. ಇದರಲ್ಲಿ ಸುಮಾರು 64% ಆರ್ಗ್ಯಾನಿಕ್ ಇಲ್ಲವೇ ಹಸಿ ಕಸವಾಗಿದೆ. ಇದನ್ನು ಗೊಬ್ಬರವಾಗಿ ಮಾರ್ಪಡಿಸಿ ಕೈದೋಟಕ್ಕೆ ಬಳಸಬಹುದು ಇಲ್ಲವೇ ರೈತರಿಗೆ ಮಾರಬಹುದು. ಉಳಿದ 28% ಒಣ ಕಸ, ಇಷ್ಟೊಂದು ದೊಡ್ಡ ಪ್ರಮಾಣದ ಕಸವನ್ನು ಮರುಬಳಕೆ ಮಾಡಬಹುದು. ಅದಾಗ್ಯೂ, ಪ್ರತಿದಿನ ಸುಮಾರು 3,500 ಟನ್‌ಗಳಷ್ಟು ಬೆರಕೆ ಕಸವನ್ನು ಬಿಬಿಎಂಪಿ ಕಲೆಹಾಕುತ್ತದೆ. ಅಂದರೆ ಅಷ್ಟೊಂದು ಕಸವನ್ನು ಹಸಿ ಕಸ, ಒಣ ಕಸ ಮತ್ತು ಅಪಾಯಕಾರಿ ಕಸ ಎಂದು ವಿಂಗಡಣೆ ಮಾಡಿಲ್ಲ ಎಂದರ್ಥ.

ಆರ್ಗ್ಯಾನಿಕ್ ಕಸದ ಜೊತೆ ಒಣ ಇಲ್ಲವೇ ಅಪಾಯಕಾರಿ ಕಸ ಬೆರೆತರೆ ಅದನ್ನು ಗೊಬ್ಬರವಾಗಿಸಲು ಸಾಧ್ಯವಿಲ್ಲ. ಮರುಬಳಸಬಹುದಾದ ಒಣ ಕಸವನ್ನು ಆಹಾರ ಇಲ್ಲವೇ ಅಪಾಯಕಾರಿ ಕಸದೊಂದಿಗೆ ಸೇರಿಸಿದರೆ ಅದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಒಣ ಕಸ ಹಾಗೂ ಹಸಿ ಕಸ ಬೇರೆ ಬೇರೆಯಾಗಿದ್ದಾಗ ಅದಕ್ಕೆ ಹಣಕಾಸಿನ ಬೆಲೆಯಿದ್ದರೂ ಅವನ್ನು ಬೆರಕೆ ಮಾಡಿದಾಗ ಆ ಬೆಲೆ ಕಳೆದುಹೋಗುತ್ತದೆ. 

Dry, wet and hazardous waste

ಹಸಿ, ಒಣ ಹಾಗೂ ಅಪಾಯಕಾರಿ ಕಸಗಳು ಯಾವುವು

ಸ್ವಲ್ಪ ಅಥವಾ ಹೆಚ್ಚು ಒದ್ದೆ ಇರುವ ಮತ್ತು ಸಾವಯವ ಗೊಬ್ಬರವಾಗಿ ಮಾಡಬಹುದಾದ ಎಲ್ಲಾ ವಸ್ತುಗಳನ್ನು ಹಸಿ ಕಸ ಎಂದು ಹೇಳಬಹುದು. ಹಸಿ ಕಸಕ್ಕೆ ಕೆಲವು ಉದಾಹರಣೆಗಳೆಂದರೆ, ಬೇಯಿಸಿದ ಅಥವಾ ಬೇಯಿಸದೆ ಇರುವ ಆಹಾರ, ಹಣ್ಣು/ತರಕಾರಿ ಚೂರುಗಳು, ಮೀನಿನ ಮುಳ್ಳು, ಕೋಳಿಯ ಮೂಳೆ, ಮೊಟ್ಟೆಯ ಸಿಪ್ಪೆ, ಗಿಡ ಮತ್ತು ಎಲೆಗಳು. ಈ ಬಗೆಯ ಕಸ ಪ್ರತಿಯೊಂದು ಮನೆಯಲ್ಲೂ ಉತ್ಪಾದನೆಯಾಗುತ್ತದೆ.

ಸ್ವಲ್ಪ ಅಥವಾ ಏನೂ ಒದ್ದೆ ಇಲ್ಲದ ಸಾವಯವ ಅಲ್ಲದ ವಸ್ತುಗಳನ್ನು ಒಣ ಕಸ ಎನ್ನಬಹುದು. ಇದರಲ್ಲಿ ಕೆಲವನ್ನು ಮರುಬಳಸಬಹುದು. ಕೆಲವು ಉದಾಹರಣೆಗಳೆಂದರೆ, ಪೇಪರ್‌, ರಟ್ಟು, ಕೆಲವು ತರಹದ ಪ್ಲಾಸ್ಟಿಕ್‌ಗಳು, ಲೋಹಗಳು, ಕೆಲವು ಎಲೆಕ್ಟ್ರಾನಿಕ್ ಬಿಡಿಭಾಗಗಳು. ಮರುಬಳಸಲು ಆಗದೆ ಇರುವ ಕೆಲವು ವಸ್ತುಗಳೆಂದರೆ, ಒಮ್ಮೆ ಬಳಸುವ ಪ್ಲಾಸ್ಟಿಕ್‌, ತೆಳು ಹೊದಿಕೆಯ ಪೇಪರ್‌, ಗಾಜು ಮತ್ತು ಮರಮುಟ್ಟು(ಫರ್ನೀಚರ್‌). ಆದರೆ ಇವನ್ನು ಮೇಲ್ಬಳಕೆ ಮಾಡಬಹುದು.

ಅಪಾಯಕಾರಿ ಕಸಗಳು ಪರಿಸರ ಮತ್ತು ಜೀವಿಗಳಿಗೆ ತುಂಬಾ ಕೆಡಕು ಉಂಟು ಮಾಡುವಂತವು. ಉದಾಹರಣೆಗೆ ಡೈಪರ್‌ಗಳು, ಬಳಸಿದ ಬ್ಯಾಂಡೇಜ್‌, ಅವಧಿ ಮುಗಿದ ಔಷಧಿಗಳು, ಸಿರೀಂಜ್‌ಗಳು, ರಾಸಾಯನಿಕಗಳು, ಕೀಲೆಣ್ಣೆ, ಟೈರ್‌ಗಳು ಹಾಗೂ ಸ್ಫೋಟಕ ವಸ್ತುಗಳು.

ಕಸ ವಿಂಗಡಣೆಯ ಮೂಲ ವಿವರ

Waste Segregation Chart

ಮನೆಗಳಲ್ಲಿ ಕಸ ವಿಂಗಡಣೆ ತುಂಬಾ ಸುಲಭ. ಮೊದ ಮೊದಲು ಸ್ವಲ್ಪ ಕಷ್ಟ ಎನಿಸಬಹುದು. ನೀವು ಮೊದಲ ಒಂದು ತಿಂಗಳು ಸ್ಚಲ್ಪ ಪ್ರಯತ್ನ ಹಾಕಿದರೆ, ನಂತರ ಅದು ನಿಮಗೆ ಒಂದು ಅಭ್ಯಾಸವಾಗಿಬಿಡುತ್ತದೆ… ನಮ್ಮ ಊರನ್ನು ಉಳಿಸುವ ಒಂದು ಒಳ್ಳೆಯ ಅಭ್ಯಾಸ.

ನೀವು ವಿಂಗಡಣೆ ಹೇಗೆ ಶುರು ಮಾಡಬಹುದು ಎಂದು ಕೆಳಗೆ ತಿಳಿಸಲಾಗಿದೆ:

  1. ಮೂರು ಕಸದ ಬುಟ್ಟಿಗಳನ್ನು ತೆಗೆದುಕೊಳ್ಳಿ – ಒಂದು ಹಸಿ ಕಸಕ್ಕೆ ಹಾಗೂ ಮತ್ತೊಂದು ಅಪಾಯಕಾರಿ ಕಸಕ್ಕೆ.
  2. ಪರಿಸರ-ಸ್ನೇಹಿ ಕಸದ ಚೀಲಗಳನ್ನು ಬಳಸಿ. ಬಳಸುವ ಎಲ್ಲಾ ಕಸದ ಚೀಲಗಲು ಸಂಪೂರ್ಣವಾಗಿ ಗೊಬ್ಬರವಾಗುವ ವಸ್ತುಗಳಾಗಿರುವ ಹಾಗೆ ನೋಡಿಕೊಳ್ಳಿ. ಸಾಧ್ಯವಾದರೆ, ಪೇಪರ್‌, ಕಾರ್ನ್‌ ಗಂಜಿ/ಹಿಟ್ಟು, ಟಪಿಯೋಕ ಮತ್ತು ಇತರ ಸುಲಭವಾಗಿ ಗೊಬ್ಬರವಾಗುವ ಸಾವಯವ ಹೊದಿಕೆ ಇರುವ ಕಸದ ಬುಟ್ಟಿ ಬಳಸಿ

ಹಸಿ ಕಸವನ್ನು ನಿರ್ವಹಿಸುವುದು

ಹಸಿ ಕಸವನ್ನು ವಿಲೇವಾರಿ ಮಾಡುವ ಅತ್ಯಂತ ಒಳ್ಳೆಯ ದಾರಿ ಅಂದರೆ ಅದನ್ನು ಗೊಬ್ಬರವಾಗಿಸುವುದು. ನಿಮ್ಮ ಮನೆ ಇಲ್ಲವೇ ನಿಮ್ಮ ಕಮ್ಯೂನಿಟಿಯಲ್ಲಿ ಹಸಿ ಕಸವನ್ನು ಗೊಬ್ಬರವಾಗಿಸಬಹುದು.

ವ್ಯಕ್ತಿಗಳಿಗೆ:

Daily Dump (ಡೈಲಿಡಂಪ್ಸ್), Eco Bin(ಇಕೋ ಬಿನ್), ಹಾಗೂ TrustBasket (ಟ್ರಸ್ಟ್ ಬಕೆಟ್) ಎಂಬ ಬ್ರಾಂಡ್‌ಗಳು ಮನೆಗಳಲ್ಲಿ ಸುಲಭವಾಗಿ ಬಳಸಬಹುದಾದ ಗೊಬ್ಬರದ ಬುಟ್ಟಿಗಳನ್ನು ಮಾರುತ್ತಾರೆ. ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಕೂಡ ಇವನ್ನು ಬಳಸಬಹುದಾಗಿದೆ.

ಇದಕ್ಕಾಗಿ ನಿಮಗೆ ಹಣ ಹೂಡಲು ಇಷ್ಟವಿಲ್ಲದಿದ್ದರೆ, ಮನೆಯಲ್ಲೇ ಸರಳವಾದ ಗೊಬ್ಬರದ ಬುಟ್ಟಿಯನ್ನು ಹೇಗೆ ತಯಾರಿಸಬಹುದು ಎಂದು ಈ ವೀಡಿಯೋದಲ್ಲಿ ನೋಡಿ ತಿಳಿಯಬಹುದು. https://www.youtube.com/watch?v=4jhpx-GuEF8

 

ಕಮ್ಯೂನಿಟಿಗಳಿಗೆ:

ನಿಮ್ಮ ಕಾಂಪ್ಲೆಕ್ಸ್‌ನಲ್ಲಿ ಕಮ್ಯೂನಿಟಿ ಕಂಪೋಸ್ಟರನ್ನು ಅಳವಡಿಸುವಂತೆ ರೆಸಿಡೆನ್ಸ್ ಅಸೋಸಿಯೇಶನ್‌ಗೆ ಮನವೊಲಿಸಬಹುದು. ಎಲ್ಲಾ ಮನೆಯವರು ಈ ಕಂಪೋಸ್ಟರ್‌ಗೆ ಬೇರೆ ಮಾಡಿದ ಹಸಿ ಕಸವನ್ನು ತಂದು ಹಾಕಬಹುದು.

ನಿಮ್ಮ ರೆಸಿಡೆನ್ಸ್ ಅಸೋಸಿಯೇಶನ್ ಅವರ ಮನವೊಲಿಸುವುದು ಹೇಗೆ? ಮೊದಲಿಗೆ ಈ ಉದ್ದೇಶದ ಮೇಲೆ ನಂಬಿಕೆ ಹೊಂದಿರುವವರ ಒಂದು ಗುಂಪನ್ನು ಮಾಡಿಕೊಳ್ಳಿ. ಕಸವನ್ನು ವಿಂಗಡಿಸುವುದರ ಪ್ರಾಮುಖ್ಯತೆಯ ಕುರಿತು ನೀವೆಲ್ಲರೂ ನಿಮ್ಮ ಪಕ್ಕದ ಮನೆಯವರಲ್ಲಿ ಜಾಗೃತಿ ಮೂಡಿಸಬಹುದು. ಹಸಿ ಹಾಗೂ ಒಣ ಕಸವನ್ನು ಬೇರೆ ಬೇರೆಯಾಗಿ ಕೂಡಿಡಲು ಬೇಕಾದ ಜಾಗವನ್ನು ನೀಡುವಂತೆ ಅಸೋಸಿಯೇಶನ್ ಅವರಿಗೆ ಕೇಳಿಕೊಳ್ಳಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಕಟ್ಟಡದ ಸಿಬ್ಬಂದಿಗಳಿಗೆ (ಸ್ವಚ್ಛ ಮಾಡುವವರು, ಸೆಕ್ಯೂರಿಟಿಗಳು) ಕಸ ವಿಂಗಡಣೆಯ ಹಂತವನ್ನು ಚೆನ್ನಾಗಿ ತಿಳಿಸಿಕೊಡಿ. 

ನೀವು ಕಂಪೋಸ್ಟ್ ಮಾಡುತ್ತಿಲ್ಲ ಎಂದಾದರೆ, ಎಲ್ಲಾ ಹಸಿ ಕಸವನ್ನು ಒಂದು ಕಸದ ಬುಟ್ಟಿಗೆ ಹಾಕಿ. ಬಿಬಿಎಂಪಿ ಪೌರಕಾರ್ಮಿಕರು ನಿಮ್ಮ ಮನೆ/ಕಮ್ಯೂನಿಟಿಗೆ ಕಸ ತೆಗೆದುಕೊಂಡು ಹೋಗಲು ಬರುವಾಗ ಅದನ್ನು ಪ್ರತಿದಿನ ಬೇರೆಯಾಗಿ ವಿಲೇವಾರಿ ಮಾಡಿ. ಇಲ್ಲದಿದ್ದರೆ ಅದು ಅಲ್ಲೇ ಕೊಳೆತು ನಾರಲು ಶುರುವಾಗುವುದು.

ಒಣ ಕಸವನ್ನು ನಿರ್ವಹಿಸುವುದು

40 ಮೈಕ್ರಾನ್‌ಗಿಂತ ಹೆಚ್ಚಿರುವ ಪ್ಲಾಸ್ಟಿಕ್ ಹಾಗೂ ಪೇಪರ್‌ಗಳನ್ನು ಮರುಬಳಕೆ ಮಾಡಬಹುದು. ನನ್ನ ಸಲಹೆಯ ಪ್ರಕಾರ ಅವನ್ನು ಬೇರೆ ಒಣ ಕಸದೊಂದಿಗೆ ಸೇರಿಸಿದೇ ಬೇರೆಯಾಗಿಡಿ, ಆಗ ಅವನ್ನು ಮರುಬಳಕೆ ಮಾಡುವ ಕೇಂದ್ರಗಳಿಗೆ ಕಳುಹಿಸಲು ಸುಲಭವಾಗುವುದು. 

ಆಹಾರ ಪದಾರ್ಥಗಳನ್ನು ಇಡುವ ಪ್ಲಾಸ್ಟಿಕ್/ಗಾಜಿನ ಡಬ್ಬಿಗಳನ್ನು ಹಾಗೂ ಪೊಟ್ಟಣಗಳನ್ನು (ಮೊಸರು, ಬೆಣ್ಣೆಯ ಪೊಟ್ಟಣಗಳು, ಇತ್ಯಾದಿ) ಒಮ್ಮೆ ನೀರಿನಲ್ಲಿ ಜಾಲಿಸಿ, ಒಣಗಿಸಿ ಬಳಿಕ ಒಣ ಕಸಕ್ಕೆ ಎಸೆಯಿರಿ. ಇಲ್ಲವಾದರೆ, ಅವನ್ನು ಬೆರಕೆ ಕಸಕ್ಕೆ ಸೇರಿಸಿ ಬಿಡುತ್ತಾರೆ.  

ಒಣ ಕಸ ಸುಲಭವಾಗಿ ಕೊಳೆಯುವುದಿಲ್ಲವಾದ್ದರಿಂದ ಅದನ್ನು ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಬಹುದು. ಹಾಗಾಗಿ, ಕಸದ ಬುಟ್ಟಿ ತುಂಬಿದ ಮೇಲೆಯೇ ಅದನ್ನು ವಿಲೇವಾರಿ ಮಾಡಬಹುದು. 

ಮನೆಯ ಅಪಾಯಕಾರಿ ಕಸವನ್ನು ನಿರ್ವಹಿಸುವುದು

ಮನುಷ್ಯರ ಕೂದಲು, ಉಗುರು, ಡೈಪರ್‌ಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕ್ಲೇ-ಬೇಸ್ಡ್ ಕ್ಯಾಟ್ ಲಿಟರ್, ವ್ಯಾಕ್ಸಿಂಗ್ ಪಟ್ಟಿಗಳು, ಬ್ಯಾಂಡೇಜ್, ಕಾಂಡೋಮ್‌ಗಳು ಹಾಗೂ ಹತ್ತಿ ಉಂಡೆಗಳಂತಹ ವಸ್ತುಗಳನ್ನು ಪೇಪರಿನಲ್ಲಿ ಸುತ್ತಿ, ಕೆಂಪು ಬಣ‌್ಣದಲ್ಲಿ ಕ್ರಾಸ್ ಗುರುತನ್ನು ಹಾಕಿ ಪೌರಕಾರ್ಮಿಕರಿಗೆ ಕೊಡಬೇಕು.

ಅವಧಿ ಮುಗಿದ ಔಷಧಿಗಳು, ಸಿರಿಂಜ್, ರೇಜರ್, ಬಲ್ಬ್, ಟ್ಯೂಬ್‌ಲೈಟ್, ಪೆಯಿಂಟ್, ವಾರ್ನಿಶ್, ಕಾಸ್ಮೆಟಿಕ್ಸ್, ಸೊಳ್ಳೆ ಬತ್ತಿ ಇಲ್ಲವೇ ಲಿಕ್ವಿಡ್, ಗೊಬ್ಬರ/ಕೀಟನಾಶಕದಂತಹ ವಸ್ತುಗಳನ್ನು ಬೇರೆಯಾಗಿ ಕೂಡಿಟ್ಟು ಪೌರಕಾರ್ಮಿಕರಿಗೆ ಕೊಡಬೇಕು.

ಕಸ ವಿಂಗಡಣೆಯ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕೆಂದರೆ, ಸಿಟಿಜನ್‌ ಮ್ಯಾಟರ್ಸ್‌ನಲ್ಲಿ ಇದರ ಬಗ್ಗೆ ವಿವರವಾದ ಸಲಹೆಗಳಿವೆ.

 

ಬೆಂಗಳೂರು ಸ್ವಚ್ಛ ನಗರ ಆಗಬಹುದೇ

Cleanest cities in India

ಇಂದೋರ್ ಹಾಗೂ ಮೈಸೂರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು. ಆದರೂ, ಸ್ವಚ್ಛ ನಗರಿ ಎಂಬ ಬಿರುದನ್ನು ಗಳಿಸುವಲ್ಲಿ ಅವು ಗೆದ್ದಿವೆ. ಹಾಗಾಗಿ, ಅತಿ ಹೆಚ್ಚು ಜನಸಂಖ್ಯೆಯಿಂದಲೇ ನಗರ ಕೊಳಕಾಗುವುದು ಎಂಬ ಸಾಮಾನ್ಯ ನಂಬಿಕೆಯನ್ನು ಇದು ತಪ್ಪೆಂದು ಎತ್ತಿಹೇಳುತ್ತದೆ.

ಹಾಗಾದರೆ, ಈ ನಗರಗಳು ಹೇಗೆ ಇದನ್ನು ಸಾಧಿಸಿದವು?

ಎಡೆಬಿಡದ ಜಾಗೃತಿಯಿಂದ ಅಲ್ಲಿನ ನಾಗರಿಕರಿಗೆ ಅವರು ಉತ್ಪಾದಿಸುವ ಕಸದ ಮೇಲೆ ಹೆಚ್ಚಿನ ಅರಿವು ಬೆಳೆಯಿತು.  

ಅವರೆಲ್ಲಾ ಮೆನೆಯಲ್ಲಿಯೇ ಕಸವನ್ನು ವಿಂಗಡಿಸಿದರು. ಈಗ, ಈ ನಗರಗಳು ಸುಮಾರು 100% ಕಸವನ್ನು ಮೂಲದಲ್ಲಿಯೇ ವಿಂಗಡಿಸುವ ಹಂತದವರೆಗೆ ಬೆಳೆದಿದ್ದಾರೆ.

ಬಳಿಕ ಅವರು ಒಂದು-ಬಾರಿ ಬಳಸುವ ಪ್ಲಾಸ್ಟಿಕ್‌ಗಳ ಬಳಕೆಯನ್ನು ಕಡಿಮೆ ಮಾಡಿದರು. ಪ್ಲಾಸ್ಟಿಕ್ ಚೀಲಗಳನ್ನು ದೂರಮಾಡಿದ್ದು ಇದರ ಮುಖ್ಯ ಹೆಜ್ಜೆಯಾಗಿತ್ತು. ಇದಕ್ಕೆಂದು, ಈಗಾಗಲೇ ಸಾಬೀತಾಗಿರುವ ಮಾದರಿಯೊಂದು ಬೆಂಗಳೂರಿನಲ್ಲಿ ಇದೆ. ‘ಎಚ್‌ಎಸ್‌ಆರ್‌ ನಲ್ಲಿ ಪ್ಲಾಸ್ಟಿಕ್ ಇಲ್ಲ’ ಎಂಬ ಆಂದೋಲನ, ಎಚ್‌ಎಸ್‌ಆರ್ ನಿವಾಸಿಗಳು ಹಾಗೂ ವ್ಯಾಪಾರಿಗಳು ಚಟುವಟಿಕೆಯಿಂದ ಪಾಲ್ಗೊಂಡಿದ್ದರ ಪರಿಣಾಮವಾಗಿ ಇಂದು ಆ ಆಂದೋಲನ ಗೆಲುವನ್ನು ಕಂಡಿದೆ.

ಮುಂದಿನ ಹಂತದಲ್ಲಿ, ಈ ನಗರಗಳಲ್ಲಿ ಜನರು ವೈಯಕ್ತಿವಾಗಿ ಹಾಗೂ ಒಂದು ಗುಂಪಿನವರು ಸೇರಿ ಕಂಪೋಸ್ಟಿಂಗ್ ಅನ್ನು ಪರಿಚಯಿಸಿದರು. ಹಸಿ ಕಸವನ್ನು ತಾವೇ ವಿಲೇವಾರಿ ಮಾಡುವಲ್ಲಿ ಹಲವಾರು ಸ್ಥಳೀಯರು ಪಳಗಿದರು. ಇಂದೋರ್ ನಗರ ಒಂದರಲ್ಲೇ 700 ಸಮೂಹ ಮಟ್ಟದ ಕಂಪೋಸ್ಟ್ ಮಾಡುವ ಯುನಿಟ್‌ಗಳಿವೆ. 

ನೀವು ನೋಡುತ್ತಿರುವ ಹಾಗೆ, ಬೆರಕೆಯಾದ ಕಸದ ಪ್ರಮಾಣವನ್ನು ಕಡಿಮೆ ಮಾಡಲು ಮನೆಯಲ್ಲಿಯೇ ಕಸವನ್ನು ವಿಂಗಡಿಸುವುದು ನಮ್ಮ ಈ ಪಯಣದ ಅತಿ ದೊಡ್ಡ ಹೆಜ್ಜೆಯಾಗಿದೆ. ನಾವೆಲ್ಲರೂ ಶ್ರದ್ಧೆಯಿಂದ ಕಸವನ್ನು ವಿಂಗಡಿಸಿದರೆ ನಮ್ಮ ಬೆಂಗಳೂರು ಆದಷ್ಟು ಬೇಗನೆ ಸ್ವಚ್ಛ ನಗರವಾಗಿ ಹೊರಹೊಮ್ಮಲಿದೆ.

ಇಂದೇ ನಿಮ್ಮ ಪ್ರಯಾಣವನ್ನು ಆರಂಭಿಸಿ

 

ಈ ಬಗೆಯ ಲೇಖನಗಳನ್ನು ನೀವು ಇನ್ನೂ ಹೆಚ್ಚು ಪಡೆಯಲು ಬಯಸುತ್ತೀರಾ?

Leave a Reply

Your email address will not be published. Required fields are marked *

14 − five =

ಇತ್ತೀಚೆಗೆ ಸೇರಿಸಿದ ವಿಷಯ

ಶೂನ್ಯ-ತ್ಯಾಜ್ಯ ಆಚರಣೆಗಳ ಸುತ್ತಲಿನ ಕಟ್ಟುಕಥೆಗಳನ್ನು ಉದ್ದೇಶಿಸಿ


Reading Time: 2 minutes

ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಪಾಟ್‌ಪುರಿಯಾಗಿರುವ ಭಾರತವು ನಮ್ಮ ಬಹುಸಂಖ್ಯೆಯ ಹಬ್ಬಗಳನ್ನು ಆಡಂಬರದಿಂದ ಆಚರಿಸುತ್ತದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳು ಒಟ್ಟಿಗೆ ಸೇರುವ ಸಂತೋಷದಾಯಕ ಸಂದರ್ಭಗಳು ಅವು. ಆದ್ದರಿಂದ, ನಾವು ಅದನ್ನು ಯಾವಾಗಲೂ ಭವ್ಯವಾಗಿ ಮಾಡಿದ್ದೇವೆ. ಈ ಸಂಪ್ರದಾಯಗಳು ಆಧುನಿಕ ಯುಗಕ್ಕೆ ತಕ್ಕಂತೆ ತಲೆಮಾರುಗಳ ಮೂಲಕ ವಿಕಸನಗೊಂಡಿವೆ. ದುರದೃಷ್ಟವಶಾತ್, ನಮ್ಮ ಆಚರಣೆಗಳಿಗೆ ನಾವು ಸೇರಿಸಿದ ಆಧುನಿಕ ಸ್ಪರ್ಶವು…

eco-friendly events KReate zero-waste sustainable events zero-waste celebrations zero-waste events

0 Comments

ತ್ಯಾಜ್ಯನೀರಿನ ಮರುಬಳಕೆ – ಭವಿಷ್ಯಕ್ಕಾಗಿ ಹೂಡಿಕೆ (ಭಾಗ 2)


Reading Time: 3 minutes

ಪುನಃ ಪಡೆದುಕೊಂಡ ನೀರಿನ ಪ್ರಾಮುಖ್ಯತೆಯನ್ನು ಈಗ ನೀವು ತಿಳಿದಿರುವಿರಿ, ತ್ಯಾಜ್ಯನೀರಿನ ಮರುಬಳಕೆಗೆ ಅನುಕೂಲಕರವಾದ ಭಾರತದಾದ್ಯಂತದ ವಿವಿಧ ನೀತಿಗಳು ಮತ್ತು ಉಪಕ್ರಮಗಳನ್ನು ನೋಡೋಣ. ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣಾ ನೀತಿಗಳು 1974 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯು ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಯನ್ನು ಬೆಂಬಲಿಸುವ ಮೊದಲ ನೀತಿಯಾಗಿದೆ. ಇದು ಜಲಮೂಲಗಳಿಗೆ ಕೈಗಾರಿಕೆಗಳ ಮಾಲಿನ್ಯಕಾರಕಗಳ ವಿಸರ್ಜನೆಯನ್ನು  ನಿರ್ಬಂಧಿಸುತ್ತದೆ….

Waste water Water Conservation

0 Comments

ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಮ್ಮ ರೈತರಿಗೆ ಅಧಿಕಾರ ನೀಡಿ


Reading Time: 4 minutes

ಭಾರತವು ಬಾಳೆಹಣ್ಣು, ಮಾವು, ಪಪ್ಪಾಯಿ ಮತ್ತು ಪೇರಳೆಗಳಂತಹ ಅನೇಕ ತಾಜಾ ಹಣ್ಣುಗಳು, ಕಡಲೆ ಮತ್ತು ಒಕ್ರಾ ತರಕಾರಿಗಳು, ಹಾಲು, ಮೆಣಸಿನಕಾಯಿ, ಕಾಳುಮೆಣಸು ಮತ್ತು ಶುಂಠಿಯಂತಹ ಪ್ರಮುಖ ಮಸಾಲೆಗಳು, ಸೆಣಬಿನಂತಹ ನಾರಿನ ಬೆಳೆಗಳು, ರಾಗಿ ಮತ್ತು ಕ್ಯಾಸ್ಟರ್ ಬೀಜಗಳನ್ನು ಉತ್ಪಾದಿಸುವಲ್ಲಿ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ನಾವು ಗೋಧಿ ಮತ್ತು ಭತ್ತದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು…

farmer empowerment Indian economy Indian farmers

0 Comments