ನಾವು ನಮ್ಮ ಕೆರೆಗಳನ್ನು ಏಕೆ ಶುಚಿಗೊಳಿಸಬೇಕು?


Reading Time: 2 minutes

ದಟ್ಟವಾದ ನಗರ ಕೇಂದ್ರಗಳಲ್ಲಿ, ಪರಿಸರ ಸಮತೋಲನವನ್ನು ನಿರ್ವಹಿಸುವಲ್ಲಿ ಕೆರೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಮೊದಲನೆಯದಾಗಿ, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳ ವಿಷಯದಲ್ಲಿ ಜೀವವೈವಿಧ್ಯತೆಯನ್ನು ಉತ್ತೇಜಿಸಲು ಹೆಚ್ಚು ಅಗತ್ಯವಿರುವ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಕೆರೆಗಳು ಸಹಾಯ ಮಾಡುತ್ತವೆ. ಅಲ್ಲದೆ, ಅಂತರ್ಜಲವನ್ನು ರೀಚಾರ್ಜ್ ಮಾಡುವುದರ ಮೂಲಕ ಅಂತರ್ಜಲದ ಮಟ್ಟವನ್ನು ನಿಯಂತ್ರಿಸುವಲ್ಲಿ ಅವುಗಳ ಪಾತ್ರ ದೊಡ್ಡದು. ಮಳೆಗಾಲದಲ್ಲಿ ಅವು ಪ್ರವಾಹವನ್ನು ತಡೆಯಲು ಸಹಕರಿಸಿದರೆ, ನೀರಿಲ್ಲದ ಒಣ ತಿಂಗಳುಗಳಲ್ಲಿ ಅವು ಜಲಾಶಯಗಳಂತೆ ವರ್ತಿಸುತ್ತವೆ. ಕೆರೆಗಳ ಸೌಂದರ್ಯ ಮತ್ತು ಮನೋರಂಜನಾ ಮೌಲ್ಯಗಳನ್ನು ಬದಿಗಿರಿಸಿದರೂ, ನಗರಗಳಲ್ಲಿ ಕೆರೆಗಳು ಬಹಳ ಪ್ರಮುಖ ಪಾತ್ರವಹಿಸುತ್ತವೆ.

ಐತಿಹಾಸಿಕವಾಗಿ ನೋಡಿದರೆ, ಅಪಾರವಾದ ಸುಂದರ ಕೆರೆಗಳು ಮತ್ತು ಜಲಸಂಪನ್ಮೂಲಗಳಿಂದ ಬೆಂಗಳೂರು ಆಶೀರ್ವದಿಸಲ್ಪಟ್ಟಿತ್ತು. ದುರದೃಷ್ಟವಶಾತ್, ನಾವು ಇದನ್ನು ಭೂತಕಾಲದಲ್ಲಿ ಹೇಳಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ. ಸರಿಯಾದ ರೂಪುರೇಷೆ ಇಲ್ಲದ ನಗರೀಕರಣದಿಂದಾಗಿ, ಬೆಂಗಳೂರಿನ ಜಲಸಂಪತ್ತು ಕಳೆದ ನಾಲ್ಕು ದಶಕಗಳಲ್ಲಿ ಶೇಕಡಾ 79 ರಷ್ಟು ಕಡಿಮೆಯಾಗಿದೆ. 1985 ರಲ್ಲಿ ಇದ್ದ 51 ಆರೋಗ್ಯಕರ ಕೆರೆಗಳಿಗೆ ಹೋಲಿಸಿದರೆ, ಇಂದು ಬರಿ 17 ಒಳ್ಳೆಯ ಕೆರೆಗಳಿವೆ.

ದುರದೃಷ್ಟವಶಾತ್, ನಾವು ಈಗಿರುವ ಕೆರೆಗಳ ಬಗ್ಗೆ ಹಿಗ್ಗುವಂತಿಲ್ಲ. ಅಧ್ಯಯನದ ಪ್ರಕಾರ, ಈ ಕೆರೆಗಳ ಪೈಕಿ 90 ಶೇಕಡಾ ಕೆರೆಗಳು ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಮತ್ತು ಕೈಗಾರಿಕೆಗಳ ಕೊಚ್ಚೆ ನೀರಿಗೆ ಗುರಿಯಾಗಿವೆ. ಇಷ್ಟೇ ಅಲ್ಲದೆ, ಘನತ್ಯಾಜ್ಯವನ್ನು ಮತ್ತು ಕಟ್ಟಡಗಳ ಕಸಕಡ್ಡಿಯನ್ನು ಬಿಸಾಡಲು ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತಿವೆ. ದುರದೃಷ್ಟವಶಾತ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಮಾನದಂಡಗಳ ಪ್ರಕಾರ ಈ ಯಾವುದೇ ಕೆರೆಗಳಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ. ಹಲವು ಕೆರೆಗಳಲ್ಲಿ ಮೀನುಗಳು ಸತ್ತಿರುವ ಘಟನೆಗಳು ಸಾಮಾನ್ಯವಾಗಿ ವರದಿಯಾಗುತ್ತಿರುತ್ತವೆ. ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾದ ಬೆಳ್ಳಂದೂರು ಕೆರೆ, ಅಧಿಕ ಮಾಲಿನ್ಯದ ಮಟ್ಟದಿಂದ, ನೊರೆ ಹಾಗೂ ಬೆಂಕಿಯಿಂದ ಕುಖ್ಯಾತಿ ಪಡೆದಿದೆ.

ಐಐಎಸ್‌ಸಿ ಯ ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಸೆಂಟರ್ ಫಾರ್ ಎಕೊಲೊಜಿಕಲ್ ಸೈನ್ಸಸ್‌ನ ರಾಮಚಂದ್ರ ಟಿ.ವಿ ಅವರು ಬೆಂಗಳೂರಿನ 105 ಕೆರೆಗಳ ಬಗ್ಗೆ ನಡೆಸಿದ ಇತ್ತೀಚಿನ ಅಧ್ಯಯನ ವೆಟ್‌ಲ್ಯಾಂಡ್ಸ್: ಟ್ರೆಶರ್ಸ್ ಆಫ್ ಬೆಂಗಳೂರು (ಅಬ್ಯೂಸ್ಡ್, ಪೊಲ್ಯೂಟೆಡ್, ಎನ್ಕ್ರೋಚ್ಡ್ ಆ್ಯಂಡ್ ವ್ಯಾನಿಶಿಂಗ್)ದ ಪ್ರಕಾರ, ಕೇವಲ ನಾಲ್ಕು ಕೆರೆಗಳು ಉತ್ತಮ ಸ್ಥಿತಿಯಲ್ಲಿದ್ದು, 25 ಕೆರೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಅವುಗಳು ಸಂಪೂರ್ಣವಾಗಿ ಹೂಳಿನಿಂದ ತುಂಬಿಕೊಂಡಿವೆ ಅಥವಾ ಅಲ್ಲಿ ಘನ ಅಥವಾ ದ್ರವ ತ್ಯಾಜ್ಯಗಳು ಎಸೆಯಲ್ಪಟ್ಟಿವೆ. ಮತ್ತು ಈ ಕೆರೆಗಳಲ್ಲಿ ಸ್ವಲ್ಪ ನೀರು ಅಥವಾ ನೀರಿಲ್ಲದಂತಾಗಿವೆ.

ಬೆಂಗಳೂರಿನ ಅಪಾರ ಜನಸಂಖ್ಯೆಗೆ ಅಂತರ್ಜಲ ಬಹಳ ಮುಖ್ಯವಾದ ನೀರಿನ ಮೂಲವಾಗಿದೆ. ಅಂತರ್ಜಲದ ಅತಿಯಾದ ದುರ್ಬಳಕೆ ಬೆಂಗಳೂರಿನ ನೀರಿನ ಮಟ್ಟವನ್ನು ತೀವ್ರವಾಗಿ ಕುಗ್ಗಿಸಿದೆ. ಕಳೆದೆರಡು ದಶಕಗಳಲ್ಲಿ ಇದು 12 ಮೀಟರ್‌ನಿಂದ 91 ಮೀಟರ್‌ಗೆ ಹೋಗಿದೆ. ಈಗಿರುವುದನ್ನು ಇನ್ನೂ ಹಾಳು ಮಾಡಲು, ಬೆಂಗಳೂರಿನ ಜನಸಂಖ್ಯೆ ವರ್ಷಕ್ಕೆ ಶೇಕಡಾ 3.5 ರಷ್ಟು ಹೆಚ್ಚಿ, 2031 ರ ವೇಳೆಗೆ 20.3 ಮಿಲಿಯನ್ ತಲುಪುವ ಸಾಧ್ಯತೆ ಇದೆ. ಇದು ಅಂತರ್ಜಲದ ಮೇಲೆ ಮತ್ತಷ್ಟು ಒತ್ತಡ ಹೇರಲಿದೆ. ಕೆರೆಗಳು ಅಂತರ್ಜಲದ ಚೇತರಿಕೆಗೆ ಪ್ರಮುಖ ಮೂಲವಾಗಿರುವುದರಿಂದ, ನಮ್ಮ ಕೆರೆಗಳನ್ನು ಕಾಪಾಡಲು ಇದು ನಮಗೆ ಇನ್ನೊಂದು ಕಾರಣವನ್ನು ಕೊಡುತ್ತದೆ.

ಆದ್ದರಿಂದ, ಬೆಂಗಳೂರಿನ ಸಾಯುತ್ತಿರುವ ಕೆರೆಗಳನ್ನು ಉಳಿಸುವ ಪ್ರಯತ್ನಗಳು ಬಹಳ ತುರ್ತಿನಿಂದ ಮಾಡಬೇಕಾದ ಕೆಲಸವಾಗಿದೆ, ಮತ್ತಿದು ನಮ್ಮ ನಗರದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.

 

ಕೆರೆಗಳನ್ನು ಶುಚಿಗೊಳಿಸುವುದನ್ನು ಯುದ್ಧದ ಹಾದಿಯಂತೆ ಪರಿಗಣಿಸಬೇಕು

ನಮ್ಮ ಈಗಿರುವ ಕೆರೆಗಳನ್ನು ಕಾಪಾಡಲು ಮತ್ತು ಅವುಗಳ ಹಿಂದಿನ ವೈಭವವನ್ನು ಮರುಸ್ಥಾಪಿಸಲು ನಾವು ಬಯಸಿದರೆ, ಕೆರೆಗಳನ್ನು ಶುಚಿಗೊಳಿಸುವ ಪ್ರಯತ್ನಗಳನ್ನು ಯುದ್ಧದ ಹಾದಿಯಂತೆ ಪರಿಗಣಿಸಬೇಕು. ಸಹಾಯ ಮಾಡುವ ಕೆಲವು ಕ್ರಮಗಳು ಇಲ್ಲಿವೆ:

 

ಸಮಗ್ರ ಪ್ರಯತ್ನ

ಪೂರ್ತಿ ಪರಿಸರ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಕೆರೆಗಳನ್ನು ಶುಚಿಗೊಳಿಸುವ ಕೆಲಸ ವ್ಯರ್ಥವಾಗುವ ಸಂಭವವಿದೆ. ಕೆರೆಗಳನ್ನು ಶುಚಿಗೊಳಿಸುವುದರ ಜೊತೆಗೆ, ಮುಂದೆ ಮತ್ತೆ ಹಾನಿಯಾಗದಂತೆ ಕೆರೆಗಳಿಗೆ ಬೇಲಿ ಹಾಕುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ವಿವಿಧ ಜಲಸಂಪನ್ಮೂಲಗಳ ಬಗ್ಗೆ ಅರ್ಥ ಮಾಡಿಕೊಂಡು ಅವುಗಳ ನಡುವಿನ ಕೊಂಡಿಯನ್ನು ಮರುಸ್ಥಾಪಿಸಬೇಕು. ಮಾಲಿನ್ಯದ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ ತೊಡೆದುಹಾಕುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮುಂದೆ ಕೊಳಚೆನೀರು ಮತ್ತು ಘನ ತ್ಯಾಜ್ಯಗಳು ಕೆರೆಗಳಿಗೆ ಬಂದು ಸೇರದಂತೆ ಅವುಗಳ ಚಿಕಿತ್ಸೆಯನ್ನು ವಿಕೇಂದ್ರೀಕರಿಸುವ ಕ್ರಮಗಳು ಬೇಕಾಗುತ್ತವೆ. ಇದರ ಜೊತೆಗೆ, ಕೆರೆಯ ಜೀವವೈವಿಧ್ಯತೆಯ ಬಗ್ಗೆ ಡಾಕ್ಯುಮೆಂಟ್ ಮಾಡುವ ಅಗತ್ಯವಿದೆ. ಇದರಿಂದಾಗಿ ಜೀವವೈವಿಧ್ಯತೆಯಲ್ಲಿ ಪ್ರಗತಿಯಿದೆಯೇ ಅಥವಾ ಕೆಡುವಿಕೆಯಿದೆಯೇ ಎನ್ನುವುದನ್ನು ಪರಿಣಾಮಕಾರಿಯಾಗಿ ಅಳೆಯಬಹುದು.

 

ನಿಯಮ

ಕೆರೆಗಳು ಮತ್ತಿತರ ಜಲಸಂಪನ್ಮೂಲಗಳ ದೀರ್ಘಕಾಲದ ಸಂರಕ್ಷಣೆಯನ್ನು ಖಚಿತಪಡಿಸುವಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ, ಜಾಗವನ್ನು ದೋಚುವುದು ಒಂದು ಸಮಸ್ಯೆಯೆಂದು ಸಾಬೀತಾದರೆ, ಜಾಗವನ್ನು ದೋಚುವುದು ದೊಡ್ಡ ಮತ್ತು ಜಾಮೀನು ರಹಿತ ಅಪರಾಧ ಎಂಬ ನಿಯಮವನ್ನು ಜಾರಿಗೆ ತರಬೇಕು. ಕೆರೆಯ ನೀರು ಬೇರೆ ಕೆಲಸಗಳಿಗೆ ಉಪಯೋಗವಾಗದಂತೆ ನಿರ್ಬಂಧಗಳನ್ನು ಹೇರುವುದು ಕೂಡಾ ಬಹಳ ಮುಖ್ಯವಾಗುತ್ತದೆ.

 

ಆಡಳಿತ

ಕೆರೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಸರಾಗವಾಗಿ ಸಾಗಲು, ಯೋಜನೆಗಳನ್ನು ಅಡೆತಡೆಯಿಲ್ಲದೆ ಕಾರ್ಯರೂಪಕ್ಕೆ ತರಲು ಹಾಗೂ ಕಾನೂನು ಮೀರುವವರ ಮತ್ತು ಕೆರೆಗಳನ್ನು ಮಲಿನಗೊಳಿಸುವವರ ವಿರುದ್ಧ ಕ್ರಮವನ್ನು ಕೈಗೊಳ್ಳಲು ಅಗತ್ಯವಿರುವ, ಶಾಸನಬದ್ಧ ಮತ್ತು ಆರ್ಥಿಕ ಸ್ವಾಯತ್ತತೆ ಅಧಿಕಾರಿಗಳಿಗೆ ಇರುವುದು ಬಹಳ ಮುಖ್ಯ.

 

ಸಮುದಾಯದ ತೊಡಗಿಕೊಳ್ಳುವಿಕೆ

ಯಾವುದೇ ಸಮುದಾಯದ ಯೋಜನೆ ಯಶಸ್ವಿಯಾಗಲು, ಸಮುದಾಯದ ಜನರು ದೊಡ್ಡ‌ಮಟ್ಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ನಗರದಲ್ಲಿ ಅತ್ಯುತ್ತಮ ನಿರ್ವಹಣೆ ಇರುವಂತಹ ಕೆಲವು ಕೆರೆಗಳು, ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಇರುವಂತಹುದು ಎಂಬುದನ್ನು ಅಧ್ಯಯನವೊಂದು ತೋರಿಸಿಕೊಟ್ಟಿದೆ. ಸ್ಥಳೀಯ ಶಾಲೆಗಳ, ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಬಹಳ ಸಹಾಯಕಾರಿಯಾಗಬಹುದು. ಹಾಗೆಯೇ, ಕೆರೆಗಳ ನಿರ್ವಹಣೆಯ ವಿಷಯದಲ್ಲಿ, ಸ್ಥಳೀಯ ಸಂಘ ಸಂಸ್ಥೆಗಳು ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ಅವರಲ್ಲಿ ಮಾಲೀಕತ್ವದ ಭಾವನೆಯನ್ನು ಮೂಡಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಈಗಿನ‌ ಪರಿಸ್ಥಿತಿ ತುಂಬಾ ಗಂಭೀರವಾಗಿ ಕಂಡರೂ, ಒಳ್ಳೆಯ ಸುದ್ದಿ ಎಂದರೆ ಇನ್ನೂ ಬಹಳ ತಡವಾಗಿಲ್ಲ. ತಳಮಟ್ಟದ ವಾಸ್ತವವನ್ನು ಮನಸ್ಸಿನಲ್ಲಿಟ್ಟುಕೊಂಡು ನಗರಾಭಿವೃದ್ಧಿಯ ಬಗ್ಗೆ ಉತ್ತಮ‌ ಮುಂದಾಲೋಚನೆ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಿದರೆ, ಅದು ಕೆರೆಗಳ ಮರುಸ್ಥಾಪನೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದೆ. ಈಗ ಬೇಕಾಗಿರುವುದು ಹೆಚ್ಚಿನ ಅರಿವು, ಹೊಣೆಗಾರಿಕೆ ಮತ್ತು ಜವಾಬ್ದಾರಿ.

 

ಈ ಬಗೆಯ ಲೇಖನಗಳನ್ನು ನೀವು ಇನ್ನೂ ಹೆಚ್ಚು ಪಡೆಯಲು ಬಯಸುತ್ತೀರಾ?

Leave a Reply

Your email address will not be published. Required fields are marked *

1 × two =

ಇತ್ತೀಚೆಗೆ ಸೇರಿಸಿದ ವಿಷಯ

ಶೂನ್ಯ-ತ್ಯಾಜ್ಯ ಆಚರಣೆಗಳ ಸುತ್ತಲಿನ ಕಟ್ಟುಕಥೆಗಳನ್ನು ಉದ್ದೇಶಿಸಿ


Reading Time: 2 minutes

ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಪಾಟ್‌ಪುರಿಯಾಗಿರುವ ಭಾರತವು ನಮ್ಮ ಬಹುಸಂಖ್ಯೆಯ ಹಬ್ಬಗಳನ್ನು ಆಡಂಬರದಿಂದ ಆಚರಿಸುತ್ತದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳು ಒಟ್ಟಿಗೆ ಸೇರುವ ಸಂತೋಷದಾಯಕ ಸಂದರ್ಭಗಳು ಅವು. ಆದ್ದರಿಂದ, ನಾವು ಅದನ್ನು ಯಾವಾಗಲೂ ಭವ್ಯವಾಗಿ ಮಾಡಿದ್ದೇವೆ. ಈ ಸಂಪ್ರದಾಯಗಳು ಆಧುನಿಕ ಯುಗಕ್ಕೆ ತಕ್ಕಂತೆ ತಲೆಮಾರುಗಳ ಮೂಲಕ ವಿಕಸನಗೊಂಡಿವೆ. ದುರದೃಷ್ಟವಶಾತ್, ನಮ್ಮ ಆಚರಣೆಗಳಿಗೆ ನಾವು ಸೇರಿಸಿದ ಆಧುನಿಕ ಸ್ಪರ್ಶವು…

eco-friendly events KReate zero-waste sustainable events zero-waste celebrations zero-waste events

0 Comments

ತ್ಯಾಜ್ಯನೀರಿನ ಮರುಬಳಕೆ – ಭವಿಷ್ಯಕ್ಕಾಗಿ ಹೂಡಿಕೆ (ಭಾಗ 2)


Reading Time: 3 minutes

ಪುನಃ ಪಡೆದುಕೊಂಡ ನೀರಿನ ಪ್ರಾಮುಖ್ಯತೆಯನ್ನು ಈಗ ನೀವು ತಿಳಿದಿರುವಿರಿ, ತ್ಯಾಜ್ಯನೀರಿನ ಮರುಬಳಕೆಗೆ ಅನುಕೂಲಕರವಾದ ಭಾರತದಾದ್ಯಂತದ ವಿವಿಧ ನೀತಿಗಳು ಮತ್ತು ಉಪಕ್ರಮಗಳನ್ನು ನೋಡೋಣ. ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣಾ ನೀತಿಗಳು 1974 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯು ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಯನ್ನು ಬೆಂಬಲಿಸುವ ಮೊದಲ ನೀತಿಯಾಗಿದೆ. ಇದು ಜಲಮೂಲಗಳಿಗೆ ಕೈಗಾರಿಕೆಗಳ ಮಾಲಿನ್ಯಕಾರಕಗಳ ವಿಸರ್ಜನೆಯನ್ನು  ನಿರ್ಬಂಧಿಸುತ್ತದೆ….

Waste water Water Conservation

0 Comments

ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಮ್ಮ ರೈತರಿಗೆ ಅಧಿಕಾರ ನೀಡಿ


Reading Time: 4 minutes

ಭಾರತವು ಬಾಳೆಹಣ್ಣು, ಮಾವು, ಪಪ್ಪಾಯಿ ಮತ್ತು ಪೇರಳೆಗಳಂತಹ ಅನೇಕ ತಾಜಾ ಹಣ್ಣುಗಳು, ಕಡಲೆ ಮತ್ತು ಒಕ್ರಾ ತರಕಾರಿಗಳು, ಹಾಲು, ಮೆಣಸಿನಕಾಯಿ, ಕಾಳುಮೆಣಸು ಮತ್ತು ಶುಂಠಿಯಂತಹ ಪ್ರಮುಖ ಮಸಾಲೆಗಳು, ಸೆಣಬಿನಂತಹ ನಾರಿನ ಬೆಳೆಗಳು, ರಾಗಿ ಮತ್ತು ಕ್ಯಾಸ್ಟರ್ ಬೀಜಗಳನ್ನು ಉತ್ಪಾದಿಸುವಲ್ಲಿ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ನಾವು ಗೋಧಿ ಮತ್ತು ಭತ್ತದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು…

farmer empowerment Indian economy Indian farmers

0 Comments