ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಉದ್ದೇಶಿಸುವುದರ ಪ್ರಾಮುಖ್ಯತೆ
Reading Time: 2 minutes2017 ರಲ್ಲಿ, ಬೆಂಗಳೂರಿನ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡವರಲ್ಲಿ 44% ನಷ್ಟು ಜನರು ಪಾದಚಾರಿಗಳಾಗಿದ್ದರು. ಬಲಿಯಾದ ಜನರಲ್ಲಿ 60% ಪ್ರಕರಣಗಳು, ರಸ್ತೆ ದಾಟುವಾಗ ಆದ ಅವಘಡಗಳನ್ನು ತೋರಿಸುತ್ತವೆ. ಮತ್ತು 19% ಜನ ರಸ್ತೆ ಬದಿಯಲ್ಲಿ ಫುಟ್ ಪಾತ್ ಮೇಲೆ ನಡೆಯುವಾಗ, ವಾಹನ ಬಂದು ಅಪ್ಪಳಿಸಿದ್ದಕ್ಕೆ ಆಹುತಿಯಾಗಿದ್ದಾರೆ.
ಈ ಅಂಕಿಅಂಶಗಳು ನಮ್ಮ ನಗರದಲ್ಲಿ ಪಾದಚಾರಿಗಳ ಸುರಕ್ಷತೆಗೆ ಎಳ್ಳಷ್ಟೂ ಕಾಳಜಿವಹಿಸುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತವೆ.

Source: The Footpath Initiative
ಪಾದಚಾರಿಗಳು ನಗರದ ಒಂದು ಭಾಗ
ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಪಾದಚಾರಿಗಳೇ. ಪಕ್ಕದಮನೆಗೆ ನಡೆದು ಹೋಗುತ್ತೇವೆ ಅಥವಾ ಮೆಟ್ರೋ ಸ್ಟೇಷನ್/ಬಸ್ ಸ್ಟಾಪ್ ಗಳಿಗೆ ಹೋಗುತ್ತೇವೆ, ಅಥವಾ ಪಾರ್ಕಿಂಗ್ ಪ್ರದೇಶದಿಂದ ನಮ್ಮ ಜಾಗಕ್ಕೆ ನಡೆದೇ ಹೋಗುತ್ತೇವೆ.
ಸಂಚಾರಕ್ಕಾಗಿ ವಿಶೇಷ ಮಾಧ್ಯಮವನ್ನೇನೋ ಬಳಸದೇ ನಡೆದುಕೊಂಡೇ ಹೋಗುವವರೆಲ್ಲ ಪಾದಚಾರಿಗಳು. ನಗರದಲ್ಲಿ ಎಲ್ಲವು ಸುಲಲಿತವಾಗಿ ನಿರ್ವಹಣೆ ಆಗುತ್ತಿರುವುದರಲ್ಲಿ ಅವರ ಪಾತ್ರ ಬಹಳ ಮುಖ್ಯವಾದುದು. ಅವರನ್ನು ನಗರದ ಒಂದು ವಿಶೇಷ ಭಾಗವೆನ್ನಬಹುದು. ಏಕೆಂದರೆ ನಡೆಯುವುದರಿಂದ ಜನರ ಅರೋಗ್ಯ ಸುಧಾರಿಸುವುದಷ್ಟೇ ಅಲ್ಲ, ಮಾಲಿನ್ಯವೂ ಕಡಿಮೆಯಾಗುತ್ತದೆ.
ಭಾರತದ ನಗರ ಪ್ರದೇಶಗಲ್ಲಿ ಈಗಾಗಲೇ ವಾಯು ಮಾಲಿನ್ಯದಿಂದ ಅನೇಕ ಜನರು ಸಾವಿಗೀಡಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಭಾರತದಲ್ಲಿ 2017 ರಲ್ಲಿ ಸುಮಾರು 1.24 ಮಿಲಿಯನ್ ಜನರು ವಾಯು ಮಾಲಿನ್ಯದಿಂದ ಮೃತಪಟ್ಟರು. ಹಾಗೂ, ಇವರಲ್ಲಿ ಅರ್ಧದಷ್ಟು ಜನ 70 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರು.
ನಮಗೆ ಗೊತ್ತೇ ಇದೆ, ನಗರಗಳಲ್ಲಿ ಆಗುತ್ತಿರುವ ಮಾಲಿನ್ಯಕ್ಕೆ ಕಾರಣಗಳಲ್ಲಿ, ವಾಹನಗಳದ್ದೇ ಮೇಲುಗೈ. CSTEP ನಡೆಸಿದ ಒಂದು ಅಧ್ಯಯನದ ಪ್ರಕಾರ, ಬೆಂಗಳೂರಿನ ವಾತಾವರಣದಲ್ಲಿ 2030 ರ ಹೊತ್ತಿಗೆ ನೈಟ್ರೋಜನ್ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಮತ್ತು ಆರ್ಗ್ಯಾನಿಕ್ ಕಂಪೌಂಡ್ ಗಳ ಶೇಖರಣೆ ದುಪ್ಪಟ್ಟಾಗಲಿದೆ. ಹಾಗೂ ವಿಷಕಾರೀ ಕಣಗಳು 70% ನಷ್ಟು ಹೆಚ್ಚಾಗಲಿವೆ.
ಪಾದಚಾರಿಗಳನ್ನು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವವರನ್ನು ಪ್ರೋತ್ಸಾಹಿಸುವುದು ಮಾಲಿನ್ಯ ನಿರ್ವಹಣೆಯ ಪ್ರಮುಖ ಅಂಗವಾಗಿದೆ.
ದುರದೃಷ್ಟವಶಾತ್, ಕಳಪೆ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಪಾದಚಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜನರು ಹತ್ತಿರವೇ ಇರುವ ಜಾಗಗಳಿಗೆ ಹೋಗಲೂ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಥವಾ ಕ್ಯಾಬ್ ಗಳನ್ನು ಬಳಸುತ್ತಿದ್ದಾರೆ. ಅಕ್ಟೋಬರ್ 2018 ರ ಹೊತ್ತಿಗೆ, ಬೆಂಗಳೂರು 76.2 ಲಕ್ಷ ವಾಹನಗಳಿಗೆ ಮನೆ ಮಾಡಿ ಕೊಟ್ಟಿತ್ತು. ಕರ್ನಾಟಕದಲ್ಲಿ ಏಳು ವರ್ಷಗಳಲ್ಲಿ ವಾಹನಗಳ ಸಂಖ್ಯೆ 100% ಹೆಚ್ಚಾಯಿತು. ಇದರಲ್ಲಿ ಬೆಂಗಳೂರಿನದೇ ಸಿಂಹ ಪಾಲು.
ಪಾದಚಾರಿಗಳ ಸಂಖ್ಯೆಯನ್ನು ಹೆಚ್ಚಿಸುವುದು
ಹೆಚ್ಚು ಹೆಚ್ಚು ಜನರನ್ನು ನಡೆಯಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸುವ ಸಲುವಾಗಿ, ಅದನ್ನು ಅವರಿಗೆ ಅನುಕೂಲಕರವಾಗಿಸಿ ಕೊಡುವುದು ಬಹಳ ಮುಖ್ಯ. ಇದಕ್ಕಾಗಿ, ನಾವು ಸರಿಯಾದ, ಅಗಲವಾದ ಮತ್ತು ಸುಸ್ಥಿತಿಯಲ್ಲಿರುವ ಫುಟ್-ಪಾತ್‌ಗಳನ್ನು ಹೊಂದುವುದು ಅತ್ಯಗತ್ಯ. ಫುಟ್ ಪಾತ್‌ಗಳನ್ನು ವ್ಯಾಪಾರಿಗಳು ಆಕ್ರಮಿಸದಂತೆ ಮತ್ತು ವಾಹನ ನಿಲುಗಡೆಗೆ ಬಳಸದಂತೆ ಕಟ್ಟುನಿಟ್ಟಾದ ನಿಯಮಗಳಿರಬೇಕು.
ಅಲ್ಲದೇ ಜನರು ರಸ್ತೆಗಳನ್ನು ಯಾವುದೇ ಜೀವ ಭಯವಿಲ್ಲದೆ ದಾಟಲು ನಾವು ಒಂದಷ್ಟು ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಒಳ್ಳೆಯ ಜೀಬ್ರಾ ಪಟ್ಟಿಗಳು, ಉಪ ಮಾರ್ಗಗಳು, ಪಾದಚಾರಿಗಳಿಗೆ ಸಂಚಾರ ನಿಯಮಗಳು ಮತ್ತು ಸರಿಯಾದ ಸ್ಥಳಗಳಲ್ಲಿ ಫುಟ್ ಓವರ್ ಬ್ರಿಜ್ ಗಳು ಇತ್ಯಾದಿ.
ನಾಗರಿಕರಿಗೆ ನಡೆಯುವುದನ್ನು ಹೆಚ್ಚು ಅನುಕೂಲಕರ ಮತ್ತು ಆಕರ್ಷಕವಾಗಿಸುವದರಿಂದ, ಬೆಂಗಳೂರಿನಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
ಈ ಬಗೆಯ ಲೇಖನಗಳನ್ನು ನೀವು ಇನ್ನೂ ಹೆಚ್ಚು ಪಡೆಯಲು ಬಯಸುತ್ತೀರಾ?
Leave a Reply