ಕುಪೇಂದ್ರ ರೆಡ್ಡಿ ಅವರು ಬೆಂಗಳೂರನ್ನು ಅಭಿವೃದ್ಧಿ ಹೊಂದಿರುವ ನಗರದ ಜೊತೆಗೆ ಸಾಕಷ್ಟು ಹಸಿರು, ಶುದ್ಧ ಕೆರೆಗಳು, ವಿಶಾಲವಾದ ರಸ್ತೆಗಳು ಮತ್ತು ಉತ್ತಮ ನಗರ ಯೋಜನೆ ಇರುವ ನಗರವನ್ನಾಗಿ ದೃಶ್ಯೀಕರಿಸುತ್ತಾರೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವಂತ ಬೆಂಗಳೂರಿನ ಜನಸಂಖ್ಯೆಯು ಎರಡು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದ್ವಿಗುಣವಾಗಿದೆ. ಇದು ನಗರಕ್ಕೆ ಬೆಳವಣಿಗೆ, ಸಮೃದ್ಧಿ ಮತ್ತು ವೈವಿಧ್ಯತೆಯನ್ನು ತಂದಿದೆ ಆದರೆ ಅದರ ಜೊತೆಗೆ ಸಂಚಾರ ಅನುಪಯುಕ್ತವಾಗುತ್ತಿದೆ, ಹಸಿರು ಕವಚವು ಕಡಿಮೆಯಾಗುತ್ತಿದೆ, ಕೆರೆಗಳು ಕಣ್ಮರೆಯಾಗುತ್ತಿರುವುದರ ಜೊತೆಗೆ ಕಸದ ವಿಲೇವಾರಿಗಳಂತಹ ಸಮಸ್ಯೆಗಳಿಗೆ ಕಾರಣವಾಗಿದೆ.
ನಗರವು ಬೆಳೆಯುತ್ತಾ ಹೋದಂತೆ, ನಾವು ನಮ್ಮ ಕರ್ತವ್ಯವನ್ನು ಮಾಡುವ ಜವಾಬ್ದಾರಿಯನ್ನು ಹೊಂದುತ್ತೇವೆ. ಸಕ್ರಿಯ ನಾಗರೀಕತೆ ಮತ್ತು ಉತ್ತಮ ಯೋಜನೆ, ಭಾರತದಲ್ಲಿ ವಾಸಿಸಲು ಉತ್ತಮವಾದ ನಗರಗಳಲ್ಲಿ, ಬೆಂಗಳೂರು ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವಂತೆ ಮಾಡಲು ಇರುವ ಏಕೈಕ ಮಾರ್ಗವಾಗಿದೆ.












